Connect with us

Latest

ಹೆಣ್ಣು ನಾಯಿಮರಿಯ ಮೇಲೆ ಅತ್ಯಾಚಾರವೆಸಗಿ ಕೊಂದ ಪಾಪಿ

Published

on

ನವದೆಹಲಿ: ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಹೆಣ್ಣು ನಾಯಿಮರಿಯ ಮೇಲೆ ಅತ್ಯಾಚಾರವೆಸಗಿರೋ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ.

ಇಲ್ಲಿನ ನರೈನಾ ಪ್ರದೇಶದ 34 ವರ್ಷದ ಕ್ಯಾಬ್ ಚಾಲಕ ನರೇಶ್ ಕುಮಾರ್ ಈ ಕೃತ್ಯವೆಸಗಿದ ಆರೋಪಿ. ನರೇಶ್‍ನ ಪೈಶಾಚಿಕ ಕೃತ್ಯದಿಂದ ನಾಯಿಮರಿಗೆ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆಯಲ್ಲಿ ನಾಯಿಯ ಮೇಲೆ ಅತ್ಯಾಚಾರ ನಡೆದಿರುವುದು ಹಾಗೂ ಶಾಕ್ ಮತ್ತು ರಕ್ತಸ್ರಾವದಿಂದ ಸಾವನ್ನಪ್ಪಿರುವುದು ದೃಢವಾಗಿದೆ.

ವರದಿಯ ಪ್ರಕಾರ ಆಗಸ್ಟ್ 25ರಂದು ಈ ಘಟನೆ ನಡೆದಿದೆ. ಕುಡಿದ ಅಮಲಿನಲ್ಲಿದ್ದ ನರೇಶ್ ನಾಯಿಮರಿಯನ್ನ ಹಿಡಿದು ಅತ್ಯಾಚಾರವೆಸಗಿದ್ದು, ಅದಕ್ಕೆ ರಕ್ತಸ್ರಾವವಾಗುತ್ತಿದ್ದರೆ ಅಲ್ಲೇ ಬಿಟ್ಟು ಹೋಗಿದ್ದಾನೆ. ನಂತರ ತನ್ನ ಈ ಕೃತ್ಯದ ಬಗ್ಗೆ ನೆರೆಹೊರೆಯವರಿಗೂ ಹೇಳಿಕೊಂಡಿದ್ದಾನೆ. ಅಲ್ಲದೆ ನರೇಶ್ ಹಾಗೂ ಆತನ ಸಹೋದರ ಸೇರಿ ನಾಯಿಮರಿಯನ್ನ ಗೋಣಿಚೀಲದಲ್ಲಿ ಹಾಕಿ ನರೈನಾದ ಕೈಗಾರಿಕಾ ಪ್ರದೇಶದಲ್ಲಿ ಎಸೆದಿದ್ದಾರೆ.

ಇದೇ ಕಾಲೋನಿಯ ನಿವಾಸಿಯಾದ ಅಭಿಷೇಕ್ ಕುಮಾರ್ ನಾಯಿ ಕಾಣೆಯಾಗಿರುವುದನ್ನು ಗಮನಿಸಿ ನರೇಶ್‍ಗೆ ಈ ಬಗ್ಗೆ ಕೇಳಿದ್ದರು. ಆಗ ಆತ ನಾಯಿಮರಿಯ ಮೇಲೆ ಅತ್ಯಾಚಾರವೆಸಗಿರೋದನ್ನ ಬಾಯ್ಬಿಟ್ಟಿದ್ದಾನೆ. ನಾಯಿಯನ್ನು ಎಸೆದಿದ್ದ ಸ್ಥಳವನ್ನು ತೋರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ನಾಯಿಮರಿಯನ್ನು ಸಂಜಯ್ ಗಾಂಧಿ ಅನಿಮಲ್ ಕೇರ್ ಸೆಂಟರ್‍ಗೆ ಕರೆದುಕೊಂಡು ಹೋಗಲಾಯಿತಾದ್ರೂ ಅಷ್ಟರಲ್ಲಾಗಲೇ ಸಾವನ್ನಪ್ಪಿತ್ತು ಎಂದು ವರದಿಯಾಗಿದೆ.

Click to comment

Leave a Reply

Your email address will not be published. Required fields are marked *

www.publictv.in