ಮುಂಬೈ: ಅಪ್ರಾಪ್ತ ಬಾಲಕಿಯ (Girl) ಮೇಲೆ ಆಕೆಯ ಮಲತಂದೆಯೇ (Stepfather) ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಘಟನೆ ಮಹಾರಾಷ್ಟ್ರದ (Maharashtra) ರಾಯಗಢ ಜಿಲ್ಲೆಯಲ್ಲಿ ನಡೆದಿದೆ.
45 ವರ್ಷದ ಆರೋಪಿ ನವಿ ಮುಂಬೈ ಸಮೀಪದ ಪನ್ವೇಲ್ ತಾಲೂಕಿನಲ್ಲಿ ವಾಸವಾಗಿದ್ದಾನೆ. 14 ವರ್ಷದ ಬಾಲಕಿಯು ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯ ತಾಯಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಬಾಲಕಿಯು 2 ತಿಂಗಳ ಗರ್ಭಿಣಿ ಆಗಿರುವ ವಿಷಯ ಬೆಳಕಿಗೆ ಬಂದಿದೆ.
Advertisement
Advertisement
ಈ ಕುರಿತು ಬಾಲಕಿಯ ಬಳಿ ತಾಯಿ ವಿಚಾರಿಸಿದ್ದಾಳೆ. ಈ ವೇಳೆ ಕಳೆದ ವರ್ಷ ನವೆಂಬರ್ ತಿಂಗಳಿಂದ ಆಕೆಯ ಮಲ ತಂದೆಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಬಗ್ಗೆ ತಾಯಿಗೆ ತಿಳಿಸಿದ್ದಾಳೆ. ಬಾಲಕಿಯ ತಾಯಿ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ದಾಖಲಿಸಿಲ್ಲ. ಆದರೆ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ನಲ್ಲಿ ಎರಡೆರಡು 90+ ಟೆನ್ಶನ್ ಬಲು ಜೋರು
Advertisement
ಮಾಹಿತಿ ಪಡೆದ ಪೊಲೀಸರು ಬಾಲಕಿಯ ಮನೆಗೆ ತೆರಳಿ ತನಿಖೆ ನಡೆಸಿದ್ದರು. ಆದರೆ ಬಾಲಕಿ ಶಾಲೆಗೆ ಹೋಗಿದ್ದಳು. ಈ ವಿಷಯ ತಿಳಿದ ಆರೋಪಿಯು ತಲೆಮರಿಸಿಕೊಂಡಿದ್ದು, ಮೊಬೈಲ್ ಸ್ವಿಚ್ಛ್ ಆಫ್ ಮಾಡಿಕೊಂಡಿದ್ದ. ಆದರೂ ಘಟನೆಗೆ ಸಂಬಂಧಿಸಿದಂತೆ ಖಂಡೇಶ್ವರ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ಮಹಿಳೆ ಮೊದಲ ಪತಿ ಆಕೆಯನ್ನು ತೊರೆದಿದ್ದ. ಇದರಿಂದ ಆರೋಪಿಯು ಸುಮಾರು 5 ವರ್ಷಗಳ ಹಿಂದೆ ಸಂತ್ರಸ್ತೆಯ ತಾಯಿಯನ್ನು ಮದುವೆಯಾಗಿದ್ದ. ಇದನ್ನೂ ಓದಿ: ಮಿತ್ರನ ತಲೆಯನ್ನೇ ಕಡಿದು, ಹೃದಯ ಕಿತ್ತು ಕೊನೆಗೆ ಪೊಲೀಸರಿಗೆ ಶರಣಾದ