ಶಿವಮೊಗ್ಗ: ವ್ಯಾಪಾರದ ವೈಷಮ್ಯಕ್ಕೆ ತರಕಾರಿಗೆ ವಿಷ ಸಿಂಪರಣೆ ಮಾಡಲು ಯತ್ನಿಸಿದ ಘಟನೆ ಶಿವಮೊಗ್ಗ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ನಡೆದಿದೆ.
ಸೋಮೇಶ್ವರ ತರಕಾರಿ ಮಂಡಿ, ಶಾಪ್ ನಂಬರ್ 18ರ ಮಾಲೀಕ ರಘು ಈ ಕೃತ್ಯ ಎಸಗಿದ್ದಾನೆ. ಸುಮಾರು ಹತ್ತು ಟನ್ ಬೂದುಕುಂಬಳ ಕಾಯಿ ರಾಶಿ ಮೇಲೆ ದ್ರವ ಪದಾರ್ಥ ಸಿಂಪರಿಸಿದ್ದಾನೆ. ಇದರಿಂದ ಕುಂಬಳಕಾಯಿ ರಾಶಿ ನಡುವೆ ಕೀಟನಾಶಕ ಪತ್ತೆ ಆಗಿದೆ.
ಆದರೆ ರಘು ದೀಪದ ಎಣ್ಣೆ ಸಿಂಪರಣೆ ಮಾಡಿದ್ದೇನೆ ಎಂದು ಹೇಳುತ್ತಿದ್ದಾನೆ. ರಘು ತನ್ನ ಮಳಿಗೆಯನ್ನು ಇನ್ನೊಬ್ಬರಿಗೆ ವ್ಯಾಪಾರಕ್ಕೆ ಕೊಟ್ಟಿದ್ದನು. ಅವರು ಅಂಗಡಿ ಬಿಡಲಿ ಎಂದು ಅವರ ಅಂಗಡಿಗೆ ರೈತರು ತಂದಿದ್ದ ಕುಂಬಳಕಾಯಿಗೆ ದ್ರವ ಪದಾರ್ಥ ಸಿಂಪಡಿಸಿದ್ದಾನೆ.
ರಘು ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಶಿವಮೊಗ್ಗ ವಿನೋಬಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಘು ಬೂದುಕುಂಬಳಕಾಯಿ ರಾಶಿಗೆ ದೀಪದ ಎಣ್ಣೆಯೋ ಅಥವಾ ಕೀಟ ನಾಶಕ ಸಿಂಪಡಣೆ ಆಗಿದೆಯೋ ಎಂಬುದು ತನಿಖೆಯಿಂದ ತಿಳಿಯಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv