ಲಂಡನ್: ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ಶನಿವಾರ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವೆ ನಡೆದ ಪಂದ್ಯದ ವೇಳೆ ಯುವಕನೊಬ್ಬ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಂದ್ಯದ ವೇಳೆ ಯುವಕ ತನ್ನ ಗೆಳತಿಗೆ ಪ್ರೇಮ ಮನವಿಯನ್ನು ಮಾಡಿದ್ದು, ಈ ವೇಳೆ ಅಚ್ಚರಿಗೊಂಡ ಯುವತಿ ಬಳಿಕ ಗೆಳೆಯನ ಪ್ರೇಮಕ್ಕೆ ಸಮ್ಮಿತಿ ಸೂಚಿಸಿ ನಗು ಬೀರಿದ್ದಾಳೆ. ಈ ಸನ್ನಿವೇಶ ಕ್ರೀಡಾಂಗಣದಲ್ಲಿ ಅಳವಡಿಸಿದ್ದ ಬೀಗ್ ಸ್ಕ್ರೀನ್ ನಲ್ಲಿಯೂ ಪ್ರಸಾರಗೊಂಡಿದ್ದು, ಕ್ರಿಕೆಟ್ ಅಭಿಮಾನಿಗಳು ಇಬ್ಬರ ಪ್ರೀತಿಗೆ ಸಂತಸ ವ್ಯಕ್ತಪಡಿಸಿದ್ದು ಕಂಡು ಬಂತು.
Advertisement
Decision Pending… SHE SAID YES!! ????????
Congratulations to these two ❤️
Scorecard/Clips: https://t.co/A4QsUpOYec#ENGvIND pic.twitter.com/WctXcwnACU
— England Cricket (@englandcricket) July 14, 2018
Advertisement
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಲಾರ್ಡ್ಸ್ ಕ್ರೀಡಾಂಗಣದ ಆಡಳಿತ ಮಂಡಳಿ ಸಹ ಯುವ ಜೋಡಿಗೆ ಶುಭಕೋರಿ ಟ್ವೀಟ್ ಮಾಡಿದೆ. ಕಳೆದ ಬಾರಿಯೂ ಲಾರ್ಡ್ಸ್ ಅಂಗಳದಲ್ಲಿ ಇಂತಹದ್ದೇ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು, ಕ್ರೀಡಾಂಗಣದ ಎಲ್ಲೆಡೆ ಪ್ರೀತಿ ತುಂಬಿದೆ ಎಂದು ಟ್ವೀಟ್ ನಲ್ಲಿ ಬರೆಯಲಾಗಿದೆ.
Advertisement
ಪಂದ್ಯದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಯುವಕ ತಾನು ಹಲವು ದಿನಗಳಿಂದ ನಾನು ಈ ಸನ್ನಿವೇಶಕ್ಕೆ ಪ್ಲಾನ್ ಮಾಡಿದ್ದೆ, ಅದರಂತೆ ತಾನು ಇದನ್ನು ಮಾಡಿದ್ದೇನೆ. ಗೆಳತಿಯೂ ತನ್ನ ಕೋರಿಕೆಯನ್ನು ಒಪ್ಪಿದ್ದು ಸಂತಸ ತಂದಿದೆ. ಸದ್ಯ ಇಬ್ಬರು ಸಹ ಪೋಷಕರ ಒಪ್ಪಿಗೆ ಪಡೆದಿದ್ದು ಶೀಘ್ರದಲ್ಲೇ ಮದುವೆ ಮಾಡಿಕೊಳ್ಳುವುದಾಗಿ ತಿಳಿಸಿದರು.
Advertisement
ಸದ್ಯ ಈ ವಿಡಿಯೋ ಕಂಡ ಹಲವರು ಯುವ ಜೋಡಿಗೆ ಶುಭ ಕೋರಿದ್ದು, ತಮ್ಮ ಜೀವನದಲ್ಲಿ ಇಂತಹ ಸನ್ನಿವೇಶ ಬರುವುದಕ್ಕಾಗಿ ಕಾತುರದಿಂದಿರುವುದಾಗಿ ಮರುಟ್ವೀಟ್ ಮಾಡಿದ್ದಾರೆ.
???? Love is in the air!
❤️????
#LoveLords#ENGvIND https://t.co/ITgkQL8TgP
— Lord's Cricket Ground (@HomeOfCricket) July 14, 2018
ROMANCE is in the Air !! A Marriage proposal at Lords during 2nd ODI match between India & England & the girl said Yes ! ❤ ????#INDvsENG #ENGvIND #INDvENG pic.twitter.com/e3xCqfTMk1
— Rosy (@rose_k01) July 14, 2018