ಸಿಡ್ನಿ: ಟಿ20 ವಿಶ್ವಕಪ್‍ನಲ್ಲಿ (T20 World Cup) ಭಾರತ (India) ಹಾಗೂ ನೆದರ್‌ಲ್ಯಾಂಡ್ (Netherland) ನಡುವಿನ ಪಂದ್ಯ ಮೈದಾನದಲ್ಲಿ ಕಿಚ್ಚು ಹೆಚ್ಚಿಸಿದ್ದರೆ, ಇತ್ತ ಯುವ ಜೋಡಿಯೊಂದು ಸ್ಟೇಡಿಯಂನಲ್ಲಿ ಪ್ರಮೋಸ್ (Propose) ಮಾಡಿ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ.
ಒಂದು ಕಡೆ ಭಾರತ ನೀಡಿದ ದೊಡ್ಡ ಮೊತ್ತವನ್ನು ಬೆನ್ನಟ್ಟಲು ನೆದರ್‌ಲ್ಯಾಂಡ್ ಮುಂದಾಗಿತ್ತು. ಈ ವೇಳೆ ಸ್ಟೇಡಿಯಂನಲ್ಲಿ ಹುಡಗನೊಬ್ಬ ತನ್ನ ಪ್ರೇಯಸಿಗೆ ಮಂಡಿಯೂರಿ ಪ್ರಪೋಸ್ ಮಾಡಿದ್ದಾನೆ. ಇದನ್ನು ಕಂಡು ಬೆರಗಾದ ಹುಡುಗಿ ಬಳಿಕ ರಿಂಗ್ ಕೈಗೆ ತೊಡಿಸಲು ಬಿಟ್ಟು ಹುಡುಗನನ್ನು ತಂಬಿಕೊಂಡು ಸಂತೋಷದಿಂದಲೇ ಹುಡುಗನ ಪ್ರಪೋಸ್ ಒಪ್ಪಿಕೊಂಡಿದ್ದಾಳೆ. ಈ ಮೂಲಕ ಮೈದಾನದಲ್ಲಿ ವಿರಾಟ್ ಕೊಹ್ಲಿ (Virat Kohli) ಮತ್ತು ಸೂರ್ಯಕುಮಾರ್ ಯಾದವ್ (Suryakumar Yadav) ಪಾರ್ಟ್‌ನರ್‌ಶಿಪ್ ಮೂಲಕ ಗಮನಸೆಳೆದರೆ, ಇತ್ತ ಪ್ರಣಯ ಪಕ್ಷಿಗಳು ಪ್ರಪೋಸ್ ಮಾಡುವ ಮೂಲಕ ಲೈಫ್ ಪಾರ್ಟ್‌ನರ್‌ಗಳಾಗುವ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಡಚ್ಚರಿಗೆ ಸೋಲಿನ ಡಿಚ್ಚಿ – ಮೊದಲ ಸ್ಥಾನಕ್ಕೆ ಜಿಗಿದ ಭಾರತ
View this post on Instagram
ನೆದರ್‌ಲ್ಯಾಂಡ್ ಬ್ಯಾಟಿಂಗ್ ಮಾಡುತ್ತಿದ್ದಾಗ 7ನೇ ಓವರ್ ಸಂದರ್ಭ ಈ ಸ್ವಾರಸ್ಯಕರ ಘಟನೆ ನಡೆದಿದೆ. ಕೂಡಲೇ ಕ್ಯಾಮೆರಾಮ್ಯಾನ್ ಈ ದೃಶ್ಯವನ್ನು ಸೆರೆಹಿಡಿದಿದ್ದಾನೆ. ಆ ಬಳಿಕ ಐಸಿಸಿ (ICC) ತನ್ನ ಸಾಮಾಜಿಕ ಜಾಲತಾಣದಲ್ಲೂ ಈ ವೀಡಿಯೋವನ್ನು ಹಾಕಿಕೊಂಡಿದೆ. ಇದನ್ನೂ ಓದಿ: ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಪುರುಷರಷ್ಟೇ ಸಮಾನ ಶುಲ್ಕ : ಬಿಸಿಸಿಐ ಘೋಷಣೆ
ಇತ್ತ ಪಂದ್ಯದಲ್ಲಿ ಭಾರತ ನೀಡಿದ 180 ರನ್‍ಗಳ ಬಿಗ್ ಸ್ಕೋರ್ ಬೆನ್ನಟ್ಟಿದ ನೆದರ್‌ಲ್ಯಾಂಡ್ ಬ್ಯಾಟ್ಸ್‌ಮ್ಯಾನ್‌ಗಳಿಗೆ ಭಾರತದ ಬೌಲರ್‌ಗಳು ನೆಲೆಯೂರಲು ಅವಕಾಶ ನೀಡದೆ ನಿಗದಿತ ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್ ಶಕ್ತರಾಗಿ ಸೋಲುಂಡರು. ಭಾರತ 56 ರನ್‍ಗಳ ಭರ್ಜರಿ ಜಯದೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ಭಾರತದ ಪರ ಬ್ಯಾಟಿಂಗ್‍ನಲ್ಲಿ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಜೊತೆಯಾಟ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಕೊಹ್ಲಿ, ಸೂರ್ಯ ಜೋಡಿ 3ನೇ ವಿಕೆಟ್‍ಗೆ ಅಜೇಯ 95 ರನ್ (48 ಎಸೆತ) ಜೊತೆಯಾಟವಾಡಿ ಮಿಂಚಿತು. ಇಲ್ಲಿ ಕೊಹ್ಲಿ ಅಜೇಯ 62 ರನ್ (44 ಎಸೆತ, 3 ಬೌಂಡರಿ, 2 ಸಿಕ್ಸ್) ಮತ್ತು ಸೂರ್ಯಕುಮಾರ್ ಯಾದವ್ 51 ರನ್ (25 ಎಸೆತ, 7 ಬೌಂಡರಿ, 1 ಸಿಕ್ಸ್) ಚಚ್ಚಿ ಇನ್ನಿಂಗ್ಸ್ ಮುಗಿಸಿದರು. ಭಾರತ 20 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 179 ರನ್‍ಗಳ ಉತ್ತಮ ಮೊತ್ತ ಪೇರಿಸಿತು.