ಕೋಲಾರ: ವ್ಯಕ್ತಿಯೊಬ್ಬ ಸಾರಿಗೆ ಬಸ್‍ಗೆ ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ದಾದಿರೆಡ್ಡಿಹಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಕುಡಿದ ಅಮಲಿನಲ್ಲಿ ಚಲಪತಿ ಎಂಬಾತ ಪೆಟ್ರೋಲ್ ಸುರಿದು ಬಸ್ ಗೆ ಬೆಂಕಿ ಹಚ್ಚಿದ್ದಾನೆ. ಶ್ರೀನಿವಾಸಪುರದ ಕೆಎಸ್‍ಆರ್ ಟಿಸಿ ಡಿಪೋಗೆ ಸೇರಿದ ಕೆಎ 07, ಎಫ್ 1529 ನಂಬರ್ ನ ಬಸ್ ಗೆ ಪೆಟ್ರೋಲ್ ಸುರಿದು ಚಲಪತಿ ಬೆಂಕಿ ಹಚ್ಚಿದ್ದು, ಪರಿಣಾಮ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಬಸ್ ಗೆ ಬೆಂಕಿ ಹಚ್ಚಿದ ಸಂದರ್ಭದಲ್ಲಿ ಅದೃಷ್ಟವಶಾತ್ ಬಸ್ ನಲ್ಲಿ ಯಾರೂ ಇರಲಿಲ್ಲ. ಆದ್ದರಿಂದ ಯಾವುದೇ ದುರಂತ ಸಂಭವಿಸಿಲ್ಲ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬಸ್‍ಗೆ ಬೆಂಕಿ ಹಚ್ಚಿ ರಾಜಕೀಯ ಬಣ್ಣ ನೀಡಿದ್ದ ಕುಡುಕ ಚಲಪತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.