ಲಕ್ನೋ: ಕುಟುಂಬಸ್ಥರು ಸಾವನ್ನಪ್ಪಿದಾಗ ಅಂತ್ಯಸಂಸ್ಕಾರ ನಡೆಸುವುದು ಸಂಪ್ರದಾಯದ ಒಂದು ಭಾಗ. ಆದ್ರೆ ಉತ್ತರಪ್ರದೇಶದ ಅಮ್ರೋಹಾದಲ್ಲಿ ವ್ಯಕ್ತಿಯೊಬ್ಬರು ತನ್ನ ಸಾಕುಗಿಳಿಯ ಅಂತ್ಯಸಂಸ್ಕಾರವನ್ನ ನೆರವೇರಿಸಿರುವುದು ಸುದ್ದಿಯಾಗಿದೆ.
Advertisement
ಪಂಜಕ್ ಕುಮಾರ್ ಮಿತ್ತಲ್ ಹಿಂದೂ ಸಂಪ್ರದಾಯದಂತೆ ಗಿಳಿಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಮಿತ್ತಲ್ ಅವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಮಾರ್ಚ್ 5 ರಂದು ಸಾವನ್ನಪ್ಪಿದ್ದ ತನ್ನ ಮುದ್ದು ಗಿಳಿಗೆ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ತನ್ನ ಪ್ರೀತಿ ಹಾಗೂ ಸ್ಮರಣೆಯನ್ನ ನಿರೂಪಿಸಿದ್ದಾರೆ. ಅಮ್ರೋಹಾದ ಹಸನ್‍ಪುರ್ ನಿವಾಸಿಯಾಗಿರೋ ಮಿತ್ತಲ್, ಗಿಳಿಯ ಅಂತ್ಯಸಂಸ್ಕಾರದ ಭಾಗವಾಗಿ ಭಾನುವಾರದಂದು ಹವನ ಹಾಗೂ ಔತಣ ಕೂಡ ಏರ್ಪಡಿಸಿದ್ದರು.
Advertisement
Advertisement
5 ವರ್ಷಗಳ ಹಿಂದೆ ಗಿಳಿಯ ಕಾಲಿಗೆ ಗಾಯವಾಗಿ ಅದು ಹಾರಾಡಲು ಸಾಧ್ಯವಿರದಿದ್ದಾಗ ನಾನದನ್ನು ದತ್ತು ತೆಗೆದುಕೊಂಡಿದ್ದೆ. ನನ್ನ ಮಗನಿಗಿಂತಲೂ ಹೆಚ್ಚಾಗಿ ಅದಕ್ಕೆ ಆರೈಕೆ ಮಾಡಿದ್ದೆ ಎಂದು ಮಿತ್ತಲ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
Advertisement
ಮಿತ್ತಲ್ ಕುಟುಂಬಸ್ಥರು ಗಿಳಿಯ ಅವಶೇಷಗಳನ್ನು ಗಂಗಾ ನದಿಗೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಹಿಂದೂ ಸಂಪ್ರದಾಯದಂತೆ ಗಿಳಿಯ ಅಂತ್ಯಕ್ರಿಯೆ ನಡೆಸಿದ್ದಷ್ಟೇ ಅಲ್ಲದೆ ಪ್ರಾರ್ಥನೆಯನ್ನು ಕೂಡ ಆಯೋಜಿಸಿದ್ದರು ಎಂದು ವರದಿಯಾಗಿದೆ.