ರಾಯ್ಪುರ: ಪೆರೋಲ್ ಮೇಲೆ ಜೈಲಿಂದ ಹೊರಬಂದ ಅರೋಪಿ ಪುತ್ರಿ, ಸೊಸೆ ಮೇಲೆ ಅತ್ಯಾಚಾರ ಎಸಗಿರುವ ಹೃದಯವಿದ್ರಾವಕ ಘಟನೆ ಛತ್ತೀಸಗಢದ ಕೊರಿಯಾ ಜಿಲ್ಲೆಯಲ್ಲಿ ನಡೆದಿದೆ.
ಮನೆಗೆ ಬಂದು 11 ವರ್ಷದ ಮಗಳ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದಾನೆ. ಮಾರನೇ ದಿನ 12 ವರ್ಷದ ಸೊಸೆ ಮೇಲೂ ಆತ್ಯಾಚಾರ ಮಾಡಿದ್ದಾನೆ. ಇಬ್ಬರಿಂದಲೂ ಪೊಲೀಸರಿಗೆ ದೂರು ಬಂದಿದ್ದು, ಆರೋಪಿಯ ಬಂಧನಕ್ಕೆ ಸ್ಪೆಷಲ್ ಟೀಂ ರಚನೆ ಮಾಡಲಾಗಿತ್ತು. 38 ವಯಸ್ಸಿನ ಆರೋಪಿಯನ್ನು ಮತ್ತೆ ಬಂಧಿಸಲಾಗಿದೆ.
ಆರೋಪಿಯನ್ನು ಮೊದಲು 2020 ರಲ್ಲಿ 16 ವರ್ಷದ ಸಂಬಂಧಿಯ ಮೇಲೆ ಅತ್ಯಾಚಾರಕ್ಕಾಗಿ ತನ್ನ ತಂದೆಯೊಂದಿಗೆ ಬಂಧಿಸಲಾಯಿತು. 2022 ರಲ್ಲಿ, ಅವರಿಗೆ ಶಿಕ್ಷೆ ವಿಧಿಸಲಾಗಿತ್ತು.