ತಿರುವನಂತಪುರಂ: ಆನ್‍ಲೈನ್‍ನಲ್ಲಿ ಬುಕ್ ಮಾಡಿರುವ ವಸ್ತುಗಳ ಬದಲಾಗಿ ಬೇರೆ ವಸ್ತುಗಳ ಬಂದಿರುವ ಎಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಆದರೆ ಇಲ್ಲೊಬ್ಬರು ವಾಚ್ ಬುಕ್ ಮಾಡಿದರೆ ಬಂದಿದ್ದು ಮಾತ್ರ ಕಾಂಡೋಮ್ ಆಗಿದೆ.
ಕೇರಳದ ಎರ್ನಾಕುಲಂನ ಥಟ್ಟಂಪಾಡಿ ನಿವಾಸಿ ಅನಿಲ್ ಕುಮಾರ್ ಅವರು 2,200 ಬೆಲೆ ಬಾಳುವ ವಾಚ್‍ನ್ನು ಆನ್‍ಲೈನ್‍ನಲ್ಲಿ ಬುಕ್ ಮಾಡಿದ್ದಾರೆ. ಡೆಲಿವರಿ ಬಾಯ್ ವಾಚ್ ಕೊಟ್ಟಿದ್ದಾನೆ. ವಾಚ್ ಬಂದಿರುವ ಖುಷಿಯಲ್ಲಿ ಅನಿಲ್ ತಕ್ಷಣ ಅಲ್ಲೇ ಬಾಕ್ಸ್ ಓಪನ್ ಮಾಡಿ ನೋಡಿದ್ದಾರೆ. ಇದನ್ನೂ ಓದಿಕ್ಯೂನಲ್ಲಿ ನಿಂತೆ 16 ಸಾವಿರ ರೂಪಾಯಿ ಸಂಪಾದಿಸುತ್ತಾನೆ
ಆದರೆ ಕಾಂಡೋಮ್ ಜೊತೆಗೆ ಕೆಲವು ವಸ್ತುಗಳು ಬಾಕ್ಸ್‌ನಲ್ಲಿ ಇರುವುದನ್ನು ನೋಡಿ ಶಾಕ್ ಆಗಿದ್ದಾರೆ. ತಕ್ಷಣ ಡೆಲಿವರಿ ಏಜೆಂಟ್‍ಗಳನ್ನು ಮನೆಯ ಆವರಣದಲ್ಲೇ ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸಲಿಂಗ ಸಂಗಾತಿ ಜೊತೆಗೆ ವಧು ಎಸ್ಕೇಪ್
ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಇದು ಕಂಪನಿ ಮಾಡಿರುವ ಎಡವಟ್ಟಾ? ಸಂಚು ರೂಪಿಸಿರುವುದಾ? ಎಂಬುದನ್ನು ತನಿಖೆ ಮಾಡುತ್ತಿದ್ದಾರೆ. ವಾಚ್ ಡೆಲಿವರಿ ಕೊಡಲು ಬಂದಿದ್ದ ಇಬ್ಬರು ಪೊಲೀಸರ ವಶದಲ್ಲಿದ್ದಾರೆ. ಇದನ್ನೂ ಓದಿ: ಆಟವಾಡುತ್ತಾ ಚರಂಡಿಗೆ ಬಿದ್ದು ಪ್ರಾಣ ಬಿಟ್ಟ ಅಕ್ಕ, ತಮ್ಮ