ಸಿಡ್ನಿ: ವಿಮಾನಯಾನದಲ್ಲಿ ಪ್ರಯಾಣಿಕರು ತಮಗೆ ಬೇಕಾದ ತಿಂಡಿಯನ್ನು ಆರ್ಡರ್ ಮಾಡುತ್ತಾರೆ. ಹಾಗೆಯೇ ಪ್ರಯಾಣಿಕರೊಬ್ಬರು ಆರ್ಡರ್ ಮಾಡಿದ ಊಟದಲ್ಲಿ ಹಲ್ಲು ಸಿಕ್ಕಿದ ಪ್ರಸಂಗವೊಂದು ನಡೆದಿದೆ.
ಆಸ್ಟ್ರೇಲಿಯಾ ಮೂಲದ ಬ್ರೈಡಲಿ ಬಟನ್ ಎಂಬವರು ಸಿಂಗಾಪುರ್ ಏರ್ ಲೈನ್ಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಪ್ರಯಾಣದ ವೇಳೆ ಅವರು ರೈಸ್ ಆರ್ಡರ್ ಮಾಡಿದ್ದರು. ಊಟ ಮಾಡುತ್ತಿದ್ದ ವೇಳೆ ಹಲ್ಲಿಗೆ ಕಲ್ಲು ಸಿಕ್ಕಿದಂತೆ ಭಾಸವಾಗಿದೆ. ಹೀಗಾಗಿ ಕೂಡಲೇ ಬಾಯಲ್ಲಿದ್ದ ತುತ್ತನ್ನು ತೆಗೆದು ನೋಡಿದಾಗ ಮನುಷ್ಯರ ಹಲ್ಲು ಸಿಕ್ಕಿದೆ. ಇದರಿಂದ ಆಕ್ರೋಶಗೊಂಡ ಬ್ರೈಡಲಿ, ಅದರ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ನೋಡಿದ ನೆಟ್ಟಗರು ಸಿಂಗಾಪುರ್ ಏರ್ ಲೈನ್ಸ್ ನಲ್ಲಿ ತಮಗಾದ ಅನುಭವವನ್ನು ಕಮೆಂಟ್ ಮೂಲಕ ಹಂಚಿಕೊಂಡಿದ್ದಾರೆ.
Advertisement
Advertisement
ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಪ್ರಯಾಣಿಕ ಬ್ರೈಡಲಿ ಅವರಲ್ಲಿ ಸಿಂಗಾಪುರ್ ಏರ್ ಲೈನ್ಸ್ ಕ್ಷಮೆ ಕೇಳಿದೆ. ಈ ಘಟನೆಯ ಕುರಿತಾಗಿ ವಿಶೇಷ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಸಿಂಗಾಪುರ್ ಏರ್ ಲೈನ್ಸ್ ತಿಳಿಸಿದೆ. ಈ ಹಿ0ದೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಇಡ್ಲಿ-ಸಾಂಬಾರ್ ಆರ್ಡರ್ ಮಾಡಿದ್ದರು. ಈ ವೇಳೆ ಸಾಂಬರ್ ನಲ್ಲಿ ಜಿರಳೆ ಪತ್ತೆಯಾಗಿತ್ತು.
Advertisement