DistrictsKarnatakaLatestMain PostMandya

ಮೇಲುಕೋಟೆಯ ಗರ್ಭಗುಡಿಯ ಮುಂದೆ ಬೆತ್ತಲಾದ ವ್ಯಕ್ತಿ!

ಮಂಡ್ಯ: ವ್ಯಕ್ತಿಯೊಬ್ಬ ದೇವರ ಗರ್ಭಗುಡಿಯ ಮುಂದೆಯೇ ಬೆತ್ತಲಾದ ವಿಲಕ್ಷಣ ಘಟನೆಯೊಂದು ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯ ಚಲುವರಾಯಸ್ವಾಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಕಳೆದ ರಾತ್ರಿ 9 ಗಂಟೆಯ ವೇಳೆಗೆ ವ್ಯಕ್ತಿ ಇದ್ದಕ್ಕಿದಂತೆ ದೇವಸ್ಥಾನ ಪ್ರವೇಶಿಸಿದ್ದಾನೆ. ಈ ವೇಳೆ ಅರ್ಚಕರು ಆತನನ್ನು ಹೊರಗೆ ಹೋಗುವಂತೆ ತಿಳಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ 150 ಹಂದಿಗಳ ಸಜೀವ ದಹನ ಮಾಡಿದ ದುಷ್ಕರ್ಮಿಗಳು!

ಈ ವೇಳೆ ವ್ಯಕ್ತಿ, ನಾನು ಹೋಗಲ್ಲ ಎಂದು ಗರ್ಭ ಗುಡಿ ಮುಂದೆ ಬೆತ್ತಲಾಗಿದ್ದಾನೆ. ವ್ಯಕ್ತಿ ಗಾಂಜಾ ಮತ್ತಿನಲ್ಲಿ ಈ ರೀತಿ ವರ್ತಿಸಿದ್ದಾನೆ ಎಂದು ಸ್ಥಳೀಯರು ಹೇಳುತ್ತಿದ್ದರೆ, ಅಧಿಕಾರಿಗಳು ಮಾತ್ರ ವ್ಯಕ್ತಿ ಗಾಂಜಾ ವ್ಯಸನಿ ಅಲ್ಲ, ಮಾನಸಿಕ ಅಸ್ವಸ್ಥ ಎಂದು ಹೇಳುತ್ತಿದ್ದಾರೆ. ಇತ್ತ ಸ್ಥಳೀಯರು ಈ ಘಟನೆಯಿಂದ ದೇವಸ್ಥಾನದ ಪಾವಿತ್ರತೆಗೆ ಧಕ್ಕೆಯಾಗಿದೆ ಎನ್ನುತ್ತಿದ್ದಾರೆ.

Leave a Reply

Your email address will not be published.

Back to top button