ಚೆನ್ನೈ: 50 ವರ್ಷದ ವ್ಯಕ್ತಿಯೊಬ್ಬ ತನ್ನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಪ್ರೇಯಸಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸೇಲಂ ರೈಲ್ವೆ ಜಂಕ್ಷನ್ ನಲ್ಲಿ ನಡೆದಿದೆ.
ಶೆರೇನಾ ಚಿತ್ರಭಾನು ಕೊಲೆಯಾದ ಮಹಿಳೆ. ಇನಾಮುಲ್ಲಾ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಇಬ್ಬರು ಐಸ್-ಕ್ರೀಮ್ ಪಾರ್ಲರ್ ನಲ್ಲಿ ಮೃತ ದೇಹಗಳಾಗಿ ಕಂಡುಬಂದಿದ್ದಾರೆ. ಈ ಬಗ್ಗೆ ಅಂಗಡಿ ಮಾಲೀಕ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಐಸ್-ಕ್ರೀಮ್ ಪಾರ್ಲರ್ ಮಾಲೀಕನನ್ನು ಪಾಂಡಿಯರಾಜನ್ ಎಂದು ಗುರುತಿಸಲಾಗಿದೆ. ಮಾಲೀಕ ತನ್ನ ಸಹಾಯಕಿ ಶೆರೇನಾ ಚಿತ್ರಭಾನು ಬಂದ ನಂತರ ಅಂಗಡಿಯಿಂದ ಹೋಗಿದ್ದಾರೆ. ಸ್ವಲ್ವ ಸಮಯದ ಬಳಿಕ ಮಾಲೀಕ ಪಾಂಡಿಯರಾಜನ್ ಹಿಂದಿರುಗಿ ಬಂದಾಗ ಪಾರ್ಲರ್ ಅಂಗಡಿ ಮುಚ್ಚಿತ್ತು. ಆಗ ಅದನ್ನು ತೆಗೆಯಲು ಪ್ರಯತ್ನಿಸುತ್ತಾರೆ. ಆದರೆ ಎಷ್ಟೆ ಪ್ರಯತ್ನ ಮಾಡಿದರು ಓಪನ್ ಆಗುವುದಿಲ್ಲ. ಕೊನೆಗೆ ಪೊಲೀಸರಿಗೆ ಫೋನ್ ಮಾಡಿ ತಿಳಿಸಿದ್ದಾರೆ.
Advertisement
ಮಾಹಿತಿ ತಿಳಿದು ಸೂರಮಂಗಲಂ ಪೊಲೀಸರು ಸ್ಥಳಕ್ಕೆ ಬಂದು ಅಂಗಡಿ ಶೆಟರ್ ಗಳನ್ನು ತೆರೆದಿದ್ದಾರೆ. ಆಗ ಪಾರ್ಲರ್ ನಲ್ಲಿ ಮಹಿಳೆ ಮತ್ತು ವ್ಯಕ್ತಿಯ ಮೃತದೇಹ ಕಂಡುಬಂದಿದೆ. ಮೃತರು ಇನಾಮುಲ್ಲಾ ಮತ್ತು ಶೀರೆನಾ ಎಂದು ತಿಳಿದು ಬಂದಿದೆ. ಇಬ್ಬರು ಮೃತರು ತಮ್ಮ ಪತಿ-ಪತ್ನಿಯಿಂದ ಬೇರೆಯಾಗಿದ್ದರು ಎಂದು ವರದಿಯಾಗಿದೆ.
Advertisement
ಇನಾಮುಲ್ಲಾ ಮತ್ತು ಶೇರೆನಾ ಪರಸ್ಪರ ಸ್ನೇಹಿತರಾಗಿದ್ದು, ಇನಾಮುಲ್ಲಾ ಹಲವಾರು ಸಂದರ್ಭಗಳಲ್ಲಿ ಶೀರೆನಾಗೆ ಸಹಾಯ ಮಾಡಿದ್ದಾನೆ. ಅಷ್ಟೇ ಅಲ್ಲದೇ ಆತ ಶೆರೇನಾಳನ್ನು ಪ್ರೀತಿಸುತ್ತಿದ್ದನು. ಈ ಬಗ್ಗೆ ಇನಾಮುಲ್ಲಾ ತನ್ನ ಭಾವನೆಗಳನ್ನು ಹೇಳಿಕೊಂಡಿದ್ದು, ಮದುವೆಯಾಗುವಂತೆ ಕೇಳಿಕೊಂಡಿದ್ದಾನೆ. ಆದರೆ ಇದಕ್ಕೆ ಶೀರೆನಾ ಒಪ್ಪಲಿಲ್ಲ. ಆಗ ಇಬ್ಬರ ಮಧ್ಯೆ ವಾದ-ವಿವಾದ ನಡೆದಿದ್ದು, ಕೊನೆಗೆ ಕೋಪಗೊಂಡ ಇನಾಮುಲ್ಲಾ ಪ್ರೇಯಸಿಯನ್ನು ಕೊಲೆ ಮಾಡಿದ್ದಾನೆ. ಬಳಿಕ ತಾನೂ ಪಾರ್ಲರ್ ನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ಇನಾಮುಲ್ಲಾ ಈ ಕೊಲೆಗೆ ಮತ್ತು ಆತ್ಮಹತ್ಯೆಗೆ ತಾನೇ ಕಾರಣ ಎಂದು ಬರೆದಿದ್ದು, ಆ ಪತ್ರ ಪೊಲೀಸರಿಗೆ ಸಿಕ್ಕಿದೆ. ಸದ್ಯಕ್ಕೆ ಪೊಲಿಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ.