Connect with us

Crime

ಸ್ನೇಹಿತನ ಕೊಲೆಗೈದು ಫೋಟೋ ವಾಟ್ಸಪ್ ಗ್ರೂಪ್‍ಗೆ ಹಾಕ್ದ!

Published

on

ಚೆನ್ನೈ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನೇ ಕೊಲೆಗೈದು, ಆತನ ಮೃತದೇಹದ ಫೋಟೋವನ್ನು ವಾಟ್ಸಪ್ ಗ್ರೂಪ್‍ಗೆ ಅಪ್‍ಲೋಡ್ ಮಾಡಿ ಕ್ರೌರ್ಯ ಮೆರೆದ ಭಯಾನಕ ಘಟನೆ ತಮಿಳುನಾಡಿನ ಪುದುಚೆರಿಯಲ್ಲಿ ನಡೆದಿದೆ.

ನಂದಮ್‍ಬಕ್ಕಮ್ ನಿವಾಸಿ ಸುಭೇಷ್ (37) ಮೃತ ದುರ್ದೈವಿ, ಆರೋಪಿಯನ್ನು ಆನಂದನ್ (32) ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ಸುಭೇಷ್ ಹಾಗೂ ಆನಂದ್ ಸೇರಿ 5 ಮಂದಿ ಸ್ನೇಹಿತರು ಜೊತೆಗೂಡಿ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಆನಂದನ್ ಹಾಗೂ ಇನ್ನೋರ್ವ ಸ್ನೇಹಿತ ಕಾರ್ತಿಕ್ ಸುಭೇಷ್‍ಗೆ ಕಾಲಿ ಬೀಯರ್ ಬಾಟಲಿಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಆನಂದನ್ ಮೃತದೇಹದ ಫೋಟೋ ಕ್ಲಿಕ್ಕಿಸಿ ವಾಟ್ಸಪ್ ಗ್ರೂಪ್‍ನಲ್ಲಿ ಶೇರ್ ಮಾಡಿದ್ದಾನೆ.

ಈ ವಿಚಾರವಾಗಿ ಗುರುವಾರ ಬೆಳಗ್ಗೆ ನಂದಮ್‍ಬಕ್ಕಮ್ ಪೊಲೀಸ್ ಠಾಣೆಗೆ ವಾಟ್ಸಪ್ ಮೂಲಕ ಮಾಹಿತಿ ದೊರಕಿದೆ. ಓರ್ವನ ಹತ್ಯೆಯಾಗಿದ್ದು, ಆತನ ಮೃತದೇಹವನ್ನು ಸೇನಾ ಕ್ವಾರ್ಟರ್ಸ್ ಸಮೀಪದ ಪೊದೆಗಳ ನಡುವೆ ಹೂಳಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮೃತ ದೇಹ ಪತ್ತೆಯಾಗಿದೆ.

ಹಳೆಯ ದ್ವೇಷವೇ ಕೊಲೆಗೆ ಕಾರಣ ಎನ್ನಲಾಗುತ್ತಿದ್ದು, ಇಬ್ಬರು ಸ್ನೇಹಿತರ ನಡುವೆ ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದಿತ್ತು. ಹೀಗಾಗಿ ಆರೋಪಿ ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಘಟನಾ ಸ್ಥಳದಲ್ಲಿ ಗಾಂಜಾ ಸೇರಿದಂತೆ ಮಾದಕ ದ್ರವ್ಯಗಳನ್ನು ಸೇವಿಸುತ್ತಿದ್ದರು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿ ಸೇರಿ ಆತನ ನಾಲ್ವರು ಸ್ನೇಹಿತರನ್ನು ಸೆರೆ ಹಿಡಿಯಲು ಪೊಲೀಸರು ಜಾಲ ಬೀಸಿದ್ದಾರೆ.

Click to comment

Leave a Reply

Your email address will not be published. Required fields are marked *