ನನ್‌ ಗರ್ಲ್‍ಫ್ರೆಂಡ್ ಜೊತೆ ಮಾತಡ್ಬೇಡ – ಸ್ನೇಹಿತನನ್ನೇ ಹತ್ಯೆಗೈದು ಚರಂಡಿಗೆ ಎಸೆದ

Public TV
2 Min Read
Delhi 1

ನವದೆಹಲಿ: ತನ್ನ ಗರ್ಲ್‍ಫ್ರೆಂಡ್ ಜೊತೆ ಮಾತನಾಡಿದ್ದಕ್ಕೆ ಯುವಕನೋರ್ವನ ಹತ್ಯೆಗೈದು ಶವವನ್ನು ಚರಂಡಿಗೆ ಎಸೆದ ಆರೋಪದಡಿ ಇಬ್ಬರು ದುಷ್ಕರ್ಮಿಗಳನ್ನು ದೆಹಲಿ ( Delhi) ಪೊಲೀಸರು ಬಂಧಿಸಿದ್ದಾರೆ.

ಗಾಂಧಿನಗರ (Gandhi Nagar) ನಿವಾಸಿ ಮನೀಶ್ ಅಲಿಯಾಸ್ ವಿಷ್ಣು ಮೃತ ದುರ್ದೈವಿಯಾಗಿದ್ದು, ಆರೋಪಿಗಳನ್ನು ಸೀತಾರಾಮ್ ಸುತಾರ್ (21) ಮತ್ತು ಸಂಜಯ್ ಬುಚ್ಚಾ (22) ಎಂದು ಗುರುತಿಸಲಾಗಿದೆ.

love

ಅಕ್ಟೋಬರ್ 22 ರಂದು ಮನೀಷ್ ಕಾಣೆಯಾಗಿರುವುದಾಗಿ ಅವರ ತಂದೆ ಭಗೀರಥ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಕರೋಲ್‍ಬಾಗ್‍ನ ಗಫಾರ್ ಮಾರುಕಟ್ಟೆಯ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಮಗ ಅಕ್ಟೋಬರ್ 21 ರಿಂದ ನಾಪತ್ತೆಯಾಗಿದ್ದಾನೆ. ಅಲ್ಲದೇ ನನ್ನ ಮಗನ ಕಾರು ದೆಹಲಿಯ ಕ್ಯಾಂಟ್ ಪ್ರದೇಶದಲ್ಲಿ ರಕ್ತದ ಕಲೆಗಳೊಂದಿಗೆ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ದೂರು ನೀಡಿದ್ದರು.

ಈ ದೂರಿನ ಅನ್ವಯ ತನಿಖೆ ಆರಂಭಿಸಿದ ಪೊಲೀಸರು, ಮನೀಶ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ರಾಜಸ್ಥಾನದ ಚುರುವಿನ  (Rajasthan’s Churu) ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಬ್ಬರೂ ಮನೀಶ್‍ನನ್ನು ಕೊಂದು ಶವವನ್ನು ಚರಂಡಿಗೆ ಎಸೆದಿರುವ ವಿಚಾರ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: KPCC ಯಲ್ಲಿ ಭಿನ್ನಮತ ಸ್ಫೋಟ – ಪುಷ್ಪಾ ಅಮರನಾಥ್ ವಜಾಕ್ಕೆ ಆಗ್ರಹ

crime

ಆರೋಪಿ ಸಂಜಯ್ ಬುಚ್ಚಾ ಕೋಲ್ಕತ್ತಾದಲ್ಲಿ ಷೇರು ದಲ್ಲಾಳಿಯೊಂದಿಗೆ ಕೆಲಸ ಮಾಡುತ್ತಿದ್ದನು. ಮನೀಶ್ ತನ್ನ ಗೆಳತಿಯನ್ನು ಭೇಟಿಯಾದ ವಿಚಾರ ತಿಳಿದ ಸಂಜಯ್ ಬುಚ್ಚಾ ಆಕೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಸಂಶಯ ಹೊಂದಿದ್ದನು. ಇದರಿಂದ ತನ್ನ ಗೆಳತಿಯೊಂದಿಗೆ ಮಾತನಾಡುವುದನ್ನು ನಿಲ್ಲಿಸುವಂತೆ ಮನೀಶ್‍ಗೆ ವಾರ್ನ್ ಮಾಡಿದ್ದನು. ಆದರೂ ಆತನ ಮಾತನ್ನು ನಿರಾಕರಿಸಿದ್ದರಿಂದ ಮನೀಶ್ ಅನ್ನು ಹತ್ಯೆಗೈಯ್ಯಲು ಸಂಜಯ್ ನಿರ್ಧರಿಸಿದನು. ಇದನ್ನೂ ಓದಿ: 2023ರ ವೇಳೆಗೆ ಚೀನಾ, ಪಾಕಿಸ್ತಾನಕ್ಕಿಂತ ಉತ್ತಮ ಸಂಬಳ ಹೆಚ್ಚಳಕ್ಕೆ ಸಾಕ್ಷಿಯಾಗಲಿದೆ ಭಾರತ

ಅಕ್ಟೋಬರ್ 21 ರಂದು ದೆಹಲಿಯಲ್ಲಿ ಭೇಟಿಯಾಗುವಂತೆ ಮನೀಶ್‍ಗೆ ಸಂಜಯ್ ತಿಳಿಸಿದ್ದನು. ಇದೇ ವೇಳೆ ಸಂಜಯ್ ತನ್ನ ನೆರೆಮನೆಯ ಸೀತಾರಾಮ್ ಅನ್ನು ಕರೆಸಿಕೊಂಡು ಇಬ್ಬರೂ ಸೇರಿಕೊಂಡು ಮನೀಶ್‍ಗೆ ಮದ್ಯ ಕುಡಿಸಿದ್ದಾರೆ. ಬಳಿಕ ಸಂಜಯ್ ತನ್ನ ಗೆಳತಿಯ ನಂಬರ್ ಮತ್ತು ಫೋಟೋಗಳನ್ನು ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದಾನೆ. ಆದರೆ ಇದಕ್ಕೆ ಮನೀಶ್ ನಿರಾಕರಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಸಂಜಯ್ ಹಾಗೂ ಸೀತಾರಾಮ್ ಕಾರಿನೊಳಗೆ ಹಗ್ಗದ ಸಹಾಯದಿಂದ ಮನೀಶ್ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.

ಬಳಿಕ ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಬಿಸಾಡಲು ಯತ್ನಿಸಿದರೂ, ದೀಪಾವಳಿ ಹಬ್ಬದ ಹಿನ್ನೆಲೆ ಎಲ್ಲೆಡೆ ಟ್ರಾಫಿಕ್ ಇದ್ದಿದ್ದರಿಂದ ಸುಮಾರು 2 ಗಂಟೆಗಳ ಕಾಲ ಮೃತದೇಹದೊಂದಿಗೆ ಕಾರಿನಲ್ಲಿಯೇ ತಿರುಗಾಡಿದ್ದಾರೆ. ಕೊನೆಗೆ ದೆಹಲಿಯ ಕ್ಯಾಂಟ್ ಪ್ರದೇಶದ ಚರಂಡಿಯೊಂದಕ್ಕೆ ಶವವನ್ನು ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article