ಅತ್ತಿಗೆಯಿಂದ ದೂರ ಇರಿ ಅಂದಿದ್ದಕ್ಕೆ ಮೈದುನನ ಕಲ್ಲಿನಿಂದ ಜಜ್ಜಿ ಕೊಲೆಗೈದ್ರು!

Public TV
1 Min Read
KALABURAGI

ಕಲಬುರಗಿ: ಅತ್ತಿಗೆಯಿಂದ ದೂರ ಇರುವುದಕ್ಕೆ ಹೇಳಿದಕ್ಕೆ ಮೈದುನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಆಳಂದ ತಾಲ್ಲೂಕಿನ ಮುನ್ನೊಳ್ಳಿ ಗ್ರಾಮದಲ್ಲಿ ನಡೆದಿದೆ.

ಹೀರಾಲಾಲ್ ಲದಾಫ್ (35) ಕೊಲೆಯಾದವ. ಕೊಲೆಯಾದ ಹೀರಾಲಾಲ್ ಅತ್ತಿಗೆ ಜೊತೆ ರವಿ ಎಂಬಾತ ಅಕ್ರಮ ಸಂಬಂಧ ಹೊಂದಿದ್ದನು. ಈ ವಿಚಾರವನ್ನು ಹೀರಾಲಾಲ್ ತನ್ನ ಅಣ್ಣ ಬಾಬು ಲದಾಫ್ಗೆ ತಿಳಿಸಿದ್ದನು. ಇತ್ತ ಅನೈತಿಕ ಸಂಬಂಧ ತಿಳಿದ ಕೂಡಲೇ ರವಿಯಿಂದ ದೂರ ಇರುವಂತೆ ಬಾಬು ತನ್ನ ಪತ್ನಿಗೆ ಹೇಳಿದ್ದರು. ಆದರೆ ಆಕೆ ತನ್ನ ಪ್ರಿಯಕರನ ಜೊತೆ ಸೇರಿ ಪತಿ ಬಾಬು ಲದಾಫ್ ಮೇಲೆಯೇ ಹಲ್ಲೆ ಮಾಡಿದ್ದಾಳೆ.

ಪತ್ನಿಯ ಅನೈತಿಕ ಸಂಬಂಧದಿಂದ ಮಾನಸಿಕವಾಗಿ ನೊಂದು ಬಾಬು ಲದಾಫ್ ಊರನ್ನೇ ಬಿಟ್ಟಿದ್ದರು. ಅಣ್ಣನ ಸಂಸಾರ ಸರಿದಾರಿಗೆ ತರಲು ಯತ್ನಿಸಿ ಅನೈತಿಕ ಸಂಬಂಧ ಬಿಟ್ಟು ಬಿಡುವಂತೆ ರವಿಗೆ ಹಿರಾಲಾಲ್ ಹೇಳಿದ್ದರು. ಇದೇ ವಿಚಾರವಾಗಿ ಹೀರಾಲಾಲ್ ರವಿ ಮಧ್ಯೆ ಆಗಾಗ ಗಲಾಟೆ ಕೂಡ ಆಗಿತ್ತು. ಇದನ್ನೂ ಓದಿ: ರಾಜ್ಯದಲ್ಲಿ ಅಪಘಾತಕ್ಕೆ ಒಂದೇ ದಿನ 51 ಬಲಿ- ಸಂಚಾರಿ ನಿಯಮ ಪಾಲನೆಗೆ ಅಲೋಕ್ ಕುಮಾರ್ ಮನವಿ

ಮೊನ್ನೆ ಕುಡಿದ ನಶೆಯಲ್ಲಿ ಗಲಾಟೆ ಮಾಡಿಕೊಂಡ ಬಳಿಕ ಕಲ್ಲಿನಿಂದ ಜಜ್ಜಿ ಹಲ್ಲೆ ಮಾಡಿದ್ರು. ಭಾನುವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಹೀರಾಲಾಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article