ಬೆಂಗಳೂರು: ಸಿನಿಮಾ ಶೈಲಿಯಲ್ಲಿ ಕಿಲೋಮೀಟರ್‌ಗಟ್ಟಲೇ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ ಘಟನೆ ಲಕ್ಕಸಂದ್ರದಲ್ಲಿ (Lakkasandra) ನಡೆದಿದೆ.
ಹತ್ಯೆಯಾದವನನ್ನು ಜೈಪ್ರಕಾಶ್ ಅಲಿಯಾಸ್ ಅಪ್ಪಿ ಎಂದು ಗುರುತಿಸಲಾಗಿದೆ. ಆತನನ್ನು ಹಂತಕರು ಸುಮಾರು ಕಿಲೋಮೀಟರ್ ದೂರದಿಂದಲೇ ಅಟ್ಟಿಸಿಕೊಂಡು ಬಂದಿದ್ದಾರೆ. ಈ ವೇಳೆ ಲಕ್ಕಸಂದ್ರದ ಹೋಟೆಲೊಂದರ ಒಳಗೆ ಆತ ನುಗ್ಗಿದ್ದು, ಅಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ. ಬಳಿಕ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಗಡಿಯಲ್ಲಿ ಪಾಕ್ ಕಳ್ಳಾಟ – ಉಗ್ರರಿಗೆ ಡ್ರೋನ್ ಮೂಲಕ ಹಣ, ಶಸ್ತ್ರಾಸ್ತ್ರ ರವಾನೆ
ಹತ್ಯೆಯಾದ ಜೈಪ್ರಕಾಶ್ ಲಕ್ಕಸಂದ್ರ ಬಸ್ ನಿಲ್ದಾಣದ ಬಳಿ ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿಯ ಅನ್ನದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ. ಈ ವೇಳೆ ನಾಲ್ಕೈದು ಜನ ಆತನನ್ನು ಗಮನಿಸಿದ್ದು, ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಈ ವೇಳೆ ಆತ ತಪ್ಪಿಸಿಕೊಳ್ಳಲು ಓಡಿ ಹೋಗಿದ್ದು, ಹೊಟೆಲ್ ಒಳಗೆ ಹೋಗಿದ್ದಾನೆ. ಆದರೂ ಬಿಡದೇ ಗ್ರಾಹಕರ ಮುಂದೆಯೇ ದುಷ್ಕರ್ಮಿಗಳು ಆತನನ್ನು ಕೊಚ್ಚಿ ಹತ್ಯೆಗೈದಿದ್ದಾರೆ.
ಕೊಲೆಯಾದ ಜಾಗದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯ ಪೊಲೀಸರ ಜೊತೆ ಹೆಚ್ಚುವರಿಯಾಗಿ ಕೆಎಸ್‍ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಅಲ್ಲದೇ ಜನರನ್ನ ಚದುರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.
ಹತ್ಯೆಯಾದ ಜೈಪ್ರಕಾಶ್ 2009ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿ ಬಂದಿದ್ದ. ಹಳೆ ದ್ವೇಷದ ಹಿನ್ನೆಲೆ ಆತನ ಹತ್ಯೆಯಾದ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬ, ಎಫ್‍ಎಸ್‍ಎಲ್ ತಂಡ, ಶ್ವಾನ ದಳ ಹಾಗೂ ಆಡುಗೋಡಿ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಶಾಸಕ ಬಿ.ಆರ್ ಪಾಟೀಲ್ ಆಪ್ತ ಬಸವರಾಜ್ ಚೌಲ್ ಪುತ್ರನ ಹತ್ಯೆ