ಬೆಂಗಳೂರು: ಜಮೀನಿನಲ್ಲಿದ್ದ ಕೇವಲ ಒಂದು ಸಾವಿರ ಮೌಲ್ಯದ ಮರದ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ, ಎರಡು ಕುಟುಂಬಗಳ ನಡುವೆ ನಡೆದ ಕಲಹ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಮಹಿಮಾಪುರದಲ್ಲಿ ಈ ಘಟನೆ ನಡೆದಿದೆ.
ನವೀನ್ (23) ಕೊಲೆಯಾದ ದುರ್ದೈವಿ. ಮಹಿಮಾಪುರ ಬೆಟ್ಟದ ಬಂಡೆಯ ಮರದ ಬಳಿ ಕೊಲೆ ಮಾಡಿ, ನಂತರ ಹಾಸನದ ಸಕಲೇಶಪುರ ಬಳಿ ನವೀನ್ ಶವವನ್ನು ಆರೋಪಿಗಳು ಎಸೆದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸಂಬಂಧಿಕರಾದ ಮಹಿಮಾಪುರದ ಸುರೇಶ್, ಬಂಡೆ ನವೀನ್, ವೇಣುಗೋಪಾಲ್, ತಿಮ್ಮ ರಾಜು ಮೇಲೆ ಮೃತ ನವೀನ್ ಅಣ್ಣ, ಚಂದ್ರಶೇಖರ್ ಕೊಲೆ ಆರೋಪದ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ನೆಲಮಂಗಲ ಗ್ರಾಮಾಂತರ ಪೊಲೀಸರು ತನಿಖೆಯ ನಂತರ ನವೀನ್ ಶವ ಪತ್ತೆ ಹಚ್ಚಿ, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಜಮೀನಿನಲ್ಲಿದ್ದ ಮರದ ಮಾರಾಟ ವಿಚಾರಕ್ಕೆ ಕೇವಲ ಒಂದು ಸಾವಿರ ರೂಪಾಯಿಗೆ ಎರಡು ಕುಟುಂಬಗಳ ಮಧ್ಯೆ ಜಗಳ ಪ್ರಾರಂಭವಾಗಿ ನವೀನ್ ನನ್ನು ಬಲಿ ತೆಗೆದುಕೊಂಡಿದೆ ಎನ್ನಲಾಗಿದೆ. ಈ ಘಟನೆ ಸಂಬಂಧ ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv