CrimeDistrictsKarnatakaLatestMain PostTumakuru

ತಲೆಗೆ ಬಲವಾದ ಆಯುಧದಿಂದ ಹೊಡೆದು ಪ್ರೀತಿಸಿ ಮದುವೆಯಾಗಿದ್ದದವಳ ಕೊಲೆ!

ತುಮಕೂರು: ರಾತ್ರಿ ಮನೆಯಲ್ಲಿದ್ದ ಮಹಿಳೆ ಬೆಳಗ್ಗೆ ಪಕ್ಕದ ತೋಟದಲ್ಲಿ ಶವವಾಗಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯು ಕೊಲೆಯಾದ ಕೆಲವೇ ಗಂಟೆಗಳಲ್ಲಿ ಸಿಕ್ಕಿಬಿದ್ದಿದ್ದಾನೆ. ಮಾತ್ರವಲ್ಲ ಕೊಲೆಗೆ ಕಾರಣವೇನು ಎಂಬುದು ಕೂಡ ಬಹಿರಂಗಗೊಂಡಿದೆ.

ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದಂಡಿನಶಿವರ ಬಳಿಯ ಕುರುಬರಹಳ್ಳಿಯ ಆಶಾ (29) ಸಾವಿಗೀಡಾದಾಕೆ. ಈಕೆ ಕುರುಬರಹಳ್ಳಿ (Kurubarahalli) ಗ್ರಾಮದ ರವಿಕುಮಾರ್ ಎಂಬಾತನನ್ನು ಇತ್ತೀಚೆಗಷ್ಟೇ ಮದುವೆಯಾಗಿದ್ದಳು. ಆದರೆ ರಾತ್ರಿ ಮನೆಯಲ್ಲಿದ್ದ ಆಶಾ, ಬೆಳಗ್ಗೆ ಪಕ್ಕದ ತೋಟದ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಳು. ನಿನ್ನೆ ಬೆಳಗ್ಗೆ ಗ್ರಾಮಸ್ಥರು ಶವವನ್ನು ನೋಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಆಳಂದದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ- 70ರ ವೃದ್ಧೆ ಮೇಲೆ 28ರ ಯುವಕನ ಅಟ್ಟಹಾಸ

ಆಶಾ ತಲೆಗೆ ಯಾವುದೋ ವಸ್ತುವಿಂದ ಬಲವಾಗಿ ಹೊಡೆದು ಕೊಲೆ ಮಾಡಿರುವುದು ಕಂಡುಬಂದಿತ್ತು. ಸ್ಥಳಕ್ಕೆ ತುರುವೇಕೆರೆ ತಾಲೂಕಿನ ದಂಡಿನಶಿವರ ಪೊಲೀಸರು (Dandinashivara Police) ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಕೊಲೆಯಾದ ಕೆಲವೇ ಗಂಟೆಗಳಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ವೆಂಕಟೇಶ್ (32) ನನ್ನು ಬಂಧಿಸಿದ್ದಾರೆ.

ಆಶಾ ಹಾಗೂ ವೆಂಕಟೇಶ್ ಮಧ್ಯೆ ಅನೈತಿಕ ಸಂಬಂಧ ಇರುವುದು ತಿಳಿದುಬಂದಿದೆ. ಅಲ್ಲದೆ ನಿನ್ನೆ ರಾತ್ರಿ ಹಣಕಾಸು ವಿಚಾರಕ್ಕೆ ವೆಂಕಟೇಶ್ ಹಾಗೂ ಆಶಾ ನಡುವೆ ಗಲಾಟೆ ನಡೆದಿದೆ. ಆಗ ಆಶಾಳ ತಲೆಗೆ ಬಲವಾಗಿ ಕಲ್ಲಿನಿಂದ ಹೊಡೆದು ಕೊಲೆ ಮಾಡಿ, ಬಳಿಕ ಆಶಾ ಮನೆ ಪಕ್ಕದಲ್ಲೇ ಇರೋ ಹಳ್ಳದಲ್ಲಿ ಶವ ಎಸೆದು ವೆಂಕಟೇಶ್ ಪರಾರಿಯಾಗಿದ್ದ.

Live Tv

Leave a Reply

Your email address will not be published. Required fields are marked *

Back to top button