ಬೆಂಗಳೂರು: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಎಂದು ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನೇ ಬರ್ಬರವಾಗಿ ಕೊಲೆಗೈದ ಘಟನೆ ಬೆಂಗಳೂರಿನ ಪಟೇಗಾರಪಾಳ್ಯದಲ್ಲಿ ನಡೆದಿದೆ.
ರಾಬಿನ್(35) ಕೊಲೆಯಾದ ವ್ಯಕ್ತಿ. ಈತನನ್ನು ಆರೋಪಿ ತನ್ವೀರ್ ಖಾನ್ ಕೊಲೆಗೈದಿದ್ದಾನೆ. ಮೃತ ರಾಬಿನ್ ಹಾಗೂ ಆತನ ಪತ್ನಿ ಜೊತೆ ಆರೋಪಿ ತನ್ವೀರ್ ಕೂಡ ಚಿಂದಿ ಆಯುವ ಕೆಲಸ ಮಾಡುತ್ತಿದ್ದು, ಉಳಿದುಕೊಳ್ಳಲು ಸ್ವಂತ ಮನೆಯಿರಲಿಲ್ಲ.
ಹೀಗಾಗಿ ನಿರ್ದಿಷ್ಟ ಮನೆಗಳಲ್ಲಿದೆ ಎಲ್ಲರೂ ಅಲ್ಲಿನ ಶೆಡ್ ಗಳಲ್ಲಿ ಮಲಗುತ್ತಿದ್ದರು. ಮೃತ ರಾಬಿನ್ ಪತ್ನಿಗೆ ಆರೋಪಿ ತನ್ವೀರ್ ಅನೈತಿಕ ಸಂಬಂಧಕ್ಕಾಗಿ ಒತ್ತಾಯಿಸುತ್ತಿದ್ದನು. ಈ ಹಿನ್ನೆಲೆಯಲ್ಲಿ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಅನ್ನೋ ಕಾರಣಕ್ಕೆ ರಾಬಿನ್ ತಲೆ ಮೇಲೆ ಕಲ್ಲು ಹಾಕಿ ತನ್ವೀರ್ ಕೊಲೆ ಮಾಡಿದ್ದಾನೆ.
ಘಟನೆ ಬಳಿಕ ಆರೋಪಿ ತನ್ವೀರ್ ನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.