-ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ
ಬೆಂಗಳೂರು: ತನ್ನ ಹೆಂಡತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಕುಡಿದ ಮತ್ತಿನಲ್ಲಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಅರುಳ್ ರಾಜ್ (36) ಕೊಲೆಯಾದ ದುರ್ದೈವಿ. ಅರುಣ್ ಎಂಬಾತನೇ ಚಾಕುವಿನಿಂದ ಇರಿದ ಆರೋಪಿ. ನೀಲಸಂದ್ರ ಬಳಿಯ ರೋಸ್ ಗಾರ್ಡನ್ 6ನೇ ಕ್ರಾಸ್ ನಲ್ಲಿ ಡಿಸೆಂಬರ್ 25 ರಂದು ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
Advertisement
Advertisement
ಅರುಳ್ ರಾಜ್ ಮತ್ತು ಅರುಣ್ ಇಬ್ಬರು ಸ್ನೇಹಿತರಾಗಿದ್ದರು. ಅರುಣ್ ಪತ್ನಿಯೊಂದಿಗೆ ಅರುಳ್ ರಾಜ್ ಅಕ್ರಮ ಸಂಬಂಧದ ಹೊಂದಿದ್ದನು ಎಂದು ತಿಳಿದು ಬಂದಿದೆ. ಡಿಸೆಂಬರ್ 25 ರಾತ್ರಿ ಇಬ್ಬರು ಒಟ್ಟಿಗೆ ಬಾರ್ ಗೆ ಹೋಗಿ ಕುಡಿದು ಇದೇ ವಿಚಾರಕ್ಕೆ ಜಗಳ ಕೂಡ ಮಾಡಿದ್ದಾರೆ. ಬಳಿಕ ಇಬ್ಬರು ಬಾರ್ ನಿಂದ ಒಟ್ಟಿಗೆ ಹೊರ ಬಂದಿದ್ದು, ಏಕಾಏಕಿ ನಡುರಸ್ತೆಯಲ್ಲೇ ಅರುಳ್ ರಾಜ್ ನನ್ನನ್ನು 16 ಬಾರಿ ಚಾಕುವಿನಿಂದ ಇರಿದು ಅರುಣ್ ಬರ್ಬರವಾಗಿ ಕೊಲೆ ಮಾಡಿದ್ದಾನೆ.
Advertisement
ಅರಣ್ ನಡೆದುಕೊಂಡು ಬರುತ್ತಿದ್ದ ಅರುಳ್ ರಾಜ್ ಮೇಲೆ ಚಾಕುವಿನಿಂದ ದಾಳಿ ಮಾಡಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಈ ಕುರಿತು ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿ ಅರುಣ್ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv