ಭೋಪಾಲ್: ಚಿಕನ್ (Chicken) ಬೇಯಿಸುವ ವಿಚಾರಕ್ಕೆ ಸಂಬಂಧಿಸಿ ದಂಪತಿ (Couple) ಜಗಳವಾಡುತ್ತಿದ್ದನ್ನು ನೋಡಿದ ನೆರೆ ಮನೆಯಾತ (neighbour) ಬಗೆಹರಿಸಲು ಹೋಗಿ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಭೋಪಾಲ್‍ನ (Bhopal) ಚವಾನಿ ಪಥರ್ ಗ್ರಾಮದಲ್ಲಿ ನಡೆದಿದೆ.
ಭೋಪಾಲ್‍ನ ಚವಾನ್ ಪಥರ್ ಗ್ರಾಮದಲ್ಲಿ ಚಿಕನ್ ಬೇಯಿಸುವ ವಿಷಯಕ್ಕೆ ದಂಪತಿ ಮನೆಯಲ್ಲಿ ಜಗಳವಾಡುತ್ತಿದ್ದರು. ಮಹಿಳೆ ಮನೆಯಲ್ಲಿ ಚಿಕನ್ ಅಡುಗೆ (Cook) ಮಾಡಲು ನಿರಾಕರಿಸಿದ್ದರು. ಆದರೆ ಆಕೆಯ ಪತಿ ಪಪ್ಪು ಅಹಿರ್ವಾರ್ ಕೋಪಗೊಂಡು ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ.
ದಂಪತಿ ಜಗಳ ಕೇಳಿ ನೆರೆಮನೆಯಲ್ಲಿ ವಾಸಿಸುತ್ತಿದ್ದ ಬಬ್ಲು ಅಹಿರ್ವಾರ್ ಸೇರಿ ಕೆಲವರು ಆ ದಂಪತಿ ಮನೆಗೆ ಬಂದಿದ್ದಾರೆ. ಈ ವೇಳೆ ಜಗಳವನ್ನು ಬಗೆ ಹರಿಸಲು ಯಶಸ್ವಿಯಾಗಿದ್ದಾರೆ. ಆದರೆ ಕೆಲ ಸಮಯದ ನಂತರ ಪಪ್ಪು ತನ್ನ ನೆರೆ ಮನೆಯ ಬಬ್ಲು ಅಹಿರ್ವಾರ್ ಮನೆಗೆ ಬಂದು ದೊಣೆಯಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾನೆ. ಇದನ್ನೂ ಓದಿ: ಸ್ನೇಹ ನಂಬಿ ಕೋಟಿ ಕೋಟಿ ಸುರಿದ- ಹಣ ಆಗ್ತಿದ್ದಂತೆ ಉಲ್ಟಾ ಹೊಡೆದ ಮಿತ್ರದ್ರೋಹಿ
ದಾಳಿ ವೇಳೆ ಬಬ್ಲುಗೆ ತೀವ್ರ ಗಾಯಗಳಾಗಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪಪ್ಪು ಅಹಿರ್ವಾರ್‍ನನ್ನು ಬಂಧಿಸಿದ್ದಾರೆ. ಘಟನೆಯ ಕುರಿತು ಇನ್ನೂ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಊರಿಗೆ ಹೋಗಲಾರದೇ ಮೂಡಿತ್ತು ಬೇಸರ- ಕಾಲೇಜು ಕ್ಯಾಂಪಸ್‍ನಲ್ಲೇ ದೀಪಾವಳಿ ಸಡಗರ