ವ್ಯಕ್ತಿಯನ್ನು ಕೊಲೆಗೈದು ಬಿಸಾಡಿ ಹೋದ್ರು!

Public TV
1 Min Read
BELAGAVI MURDER

ಬೆಳಗಾವಿ: ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈದು ಅನಗೋಳ ಗ್ರಾಮದ ಹೊರವಲಯದಲ್ಲಿರುವ ಕೆರೆ ಹತ್ತಿರ ವ್ಯಕ್ತಿಯ ಶವವನ್ನು ಬಿಸಾಡಿ ಹೋಗಿರುವ ಘಟನೆ ನಡೆದಿದೆ.

ತಾಲೂಕಿನ ಯಳ್ಳೂರ ಗ್ರಾಮದ ಸಂಜಯ್ ತುಕಾರಾಮ್ ಪಾಟೀಲ್ (Sanjay Tukaram Patil) (34) ಕೊಲೆಯಾದ ಯುವಕ. ಬೆಳಗಾವಿ ತಾಲೂಕಿನ ಆನಗೋಳ ಗ್ರಾಮದಲ್ಲಿ ಹೊರವಲಯದಲ್ಲಿರುವ ಕೆರೆ ಹತ್ತಿರ ವ್ಯಕ್ತಿಯ ಶವವನ್ನು ಬಿಸಾಡಿ ಹೋಗಿದ್ದಾರೆ.

ಕೃಷಿ ಕಾರ್ಯಕ್ಕೆ ಹೊರಟಿದ್ದ ರೈತರು ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಲಸಕ್ಕೆ ಹೋಗಿ ಬರುವುದಾಗಿ ಮೊನ್ನೆ ಮನೆಯಿಂದ ಹೊರಬಂದಿದ್ದ ಸಂಜಯ್ ಪಾಟೀಲ್ ಬುಧವಾರ ಮನೆಗೆ ಬಾರಾದೇ ಇದ್ದಾಗ ಸಂಜಯ್ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಇದನ್ನೂ ಓದಿ: ಬ್ರಿಜ್ ಭೂಷಣ್ ವಿರುದ್ಧ 1,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ – ಪೋಕ್ಸೊ ಕೇಸ್‌ ರದ್ದಿಗೆ ದೆಹಲಿ ಪೊಲೀಸರ ಶಿಫಾರಸ್ಸು

ಮೃತದೇಹ ಪತ್ತೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಟಿಳಕವಾಡಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹ ಜಿಲ್ಲಾಸ್ಪತ್ರೆಗೆ ರವಾನೆ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಿದ್ದಾರೆ.

 

Share This Article