Bengaluru CityCrimeKarnatakaLatestMain Post

ಕ್ಷುಲ್ಲಕ ಕಾರಣಕ್ಕೆ ಜಗಳ – ಬೆಂಗ್ಳೂರಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ

ಬೆಂಗಳೂರು: ನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ರಾಜಗೋಪಾಲ ನಗರದಲ್ಲಿ ನಡೆದಿದೆ.

Crime-Scene

ಅಜೀಂ (42) ಕೊಲೆಯಾದ ದುರ್ದೈವಿ. ರಾಜಗೋಪಾಲ ನಗರ ಪೊಲೀಸ್ ಠಾಣೆಯಿಂದ 500 ಮೀಟರ್ ದೂರದಲ್ಲೇ ಘಟನೆ ನಡೆದಿದ್ದು, ರಾತ್ರಿ 10:30 ಸುಮಾರಿಗೆ ಬಾರ್‌ನಿಂದ ಹೊರಬಂದ ಅಜೀಂ ಹಾಗೂ ಅನೀಶ್ ನಡುವೆ ಗಲಾಟೆ ನಡೆದಿದೆ. ಅಜೀಂ ಮದ್ಯದ ಅಮಲಿನಲ್ಲಿ ಅನೀಶ್ ಮೇಲೆ ಹಲ್ಲೆಗೆ ಮುಂದಾದಾಗ ಅನೀಶ್ ಚಾಕುವಿಂದ ಚುಚ್ಚಿದ್ದಾನೆ. ಹೊಟ್ಟೆ ಭಾಗಕ್ಕೆ ಗಂಭೀರವಾಗಿ ಚಾಕು ಚುಚ್ಚಿದ್ದರಿಂದ ಅಜೀಂ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ.

ಘಟನೆ ಸಂಬಂದ ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Live Tv

Leave a Reply

Your email address will not be published.

Back to top button