ಕೋಲ್ಕತ್ತಾ: ಮಗನೊಬ್ಬ ತಾಯಿಯ ಪಿಂಚಣಿ ಪಡೆಯಲು ಆಕೆಯ ಮೃತದೇಹವನ್ನು 3 ವರ್ಷ ಫ್ರಿಡ್ಜ್ ನಲ್ಲಿಟ್ಟಿದ್ದ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.
ಸುಬ್ರೂತ್ ಮಜುಮ್ಮ್ ದಾರ್ ಪೆನ್ಷನ್ ಗಾಗಿ ತಾಯಿಯ ಮೃತದೇಹವನ್ನು ಫ್ರಿಡ್ಜ್ ನಲ್ಲಿಟ್ಟ ಮಗ. ಮೃತ ಮಹಿಳೆ ಭಾರತ ಆಹಾರ ನಿಗಮ(ಎಫ್‍ಸಿಐ)ನಿವೃತ್ತ ಅಧಿಕಾರಿಯಾಗಿದ್ದು, ತಿಂಗಳಿಗೆ 50 ಸಾವಿರ ರೂ. ಪೆನ್ಷನ್ ಪಡೆಯುತ್ತಿದ್ದರು. ಮೃತ ತಾಯಿಯ ಮಗ ಪೆನ್ಷನ್‍ಗಾಗಿ ತನ್ನ ಆಕೆಯ ಮೃತದೇಹವನ್ನು 3 ವರ್ಷಗಳ ಕಾಲ ಫ್ರಿಡ್ಜ್ ನಲ್ಲಿಟ್ಟದ್ದನು. ನಂತರ ತಿಂಗಳು ತಿಂಗಳು ಪೆನ್ಷನ್‍ಗಾಗಿ ಆತ ತನ್ನ ತಾಯಿಯ ಹೆಬ್ಬೆಟ್ಟನ್ನು ಪಡೆಯುತ್ತಿದ್ದ ಎಂದು ಹೇಳಲಾಗಿದೆ.
Advertisement
Advertisement
ಪ್ರತಿ ತಿಂಗಳು ತನ್ನ ತಾಯಿಗೆ ಸಿಗುತ್ತಿದ್ದ ಪೆನ್ಷನ್ ಹಣವನ್ನು ಮಗ ಬ್ಯಾಂಕಿನಿಂದ ತೆಗೆಯುತ್ತಿದ್ದನು. ಮಹಿಳೆ ಸಾವಿನ ಮೂರು ವರ್ಷಗಳ ಕಾಲ ಹೀಗೆ ನಡೆಯುತ್ತಿತ್ತು. ಮೂರು ವರ್ಷ ಮೃತದೇಹವನ್ನು ಹೇಗೆ ಕಾಪಾಡಿಕೊಳ್ಳುತ್ತಿದ್ದನು ಎಂದು ಪೊಲೀಸರು ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಮೂರು ವರ್ಷದಿಂದ ಮಗ ಶವವನ್ನು ಫ್ರಿಡ್ಜ್ ನಲ್ಲಿಟ್ಟಿರುವುದು ನನಗೆ ತಿಳಿದಿತ್ತು ಎಂದು ಮಹಿಳೆಯ ಪತಿ ತಿಳಿಸಿದ್ದಾರೆ.
Advertisement
Advertisement
ಇನ್ನೂ ಆರೋಪಿಗಳಿಬ್ಬರು ತಮ್ಮ ಜೊತೆ ಮಾತನಾಡುತ್ತಿರಲಿಲ್ಲ ಎಂದು ಅಕ್ಕಪಕ್ಕದ ಮನೆಯವರು ಮಾಧ್ಯಮದಲ್ಲಿ ತಿಳಿಸಿದ್ದಾರೆ. ಮಹಿಳೆ ಮೃತಪಟ್ಟ ವಿಷಯ ತಿಳಿದಿತ್ತು ಆದರೆ ಅಂತ್ಯಸಂಸ್ಕಾರ ಮಾಡಿದ್ದಾರೋ ಇಲ್ಲವೋ ಎಂಬುದು ತಿಳಿದಿಲ್ಲ ಎಂದು ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ.
ಕೃತ್ಯದ ಬಗ್ಗೆ ಮೂಲಗಳ ಖಚಿತ ಮಾಹಿತಿ ತಿಳಿದು ಸುಬ್ರೂತ್ ಮಜುಮ್ಮ್‍ದಾರ್ ಮನೆಗೆ ಪೊಲೀಸರು ದಾಳಿ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಮೃತದೇಹವನ್ನು ವಶಕ್ಕೆ ಪಡೆದು ಮಗ ಹಾಗೂ ಆತನ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
#WestBengal: Police recovered body of a female from a refrigerator inside a house in Behala, Kolkata. The body was preserved for 2 years in the refrigerator by her son. Woman's son and husband detained for interrogation. Investigation underway. pic.twitter.com/DXXzDWme5s
— ANI (@ANI) April 5, 2018