ಬೀಜಿಂಗ್: ಬದುಕಿನ ಜಂಜಾಟ ಎಷ್ಟೋ ಜೀವಗಳ ನಡುವೆ ಭಿನ್ನಾಭಿಪ್ರಾಯ ಉಂಟುಮಾಡುತ್ತದೆ. ಸಹಿಸಲಾಗದ ಕೆಲವರು ತಮ್ಮ ಸ್ನೇಹಿತರಿಂದ ದೂರವಿರಲು ಪ್ರಯತ್ನಿಸಿದರೆ ಇನ್ನೂ ಕೆಲವರು ಕುಟುಂಬದಿಂದಲೇ ದೂರಾಗಬೇಕು ಎನ್ನುತ್ತಾರೆ. ಕೆಲವರು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾರೆ. ಜಗತ್ತಿನ ಗೇಟ್‌ವೇ ಸ್ಥಳಗಳು ಹಾಗೂ ಅಡಗು ತಾಣಗಳು ಇಂತಹ ಎಷ್ಟೋ ಜನರು ಪಾರಾಗಲು ಸಹಾಯ ಮಾಡುತ್ತವೆ.
ಆದರೆ ವಿಮಾನ ನಿಲ್ದಾಣಗಳು ಖಂಡಿತವಾಗಿಯೂ ತಪ್ಪಿಸಿಕೊಳ್ಳುವ ಸ್ಥಳ ಅಥವಾ ಅಡಗುತಾಣವಾಗಿಲ್ಲ. ಬದಲಾಗಿ ಅವು ಶಾಶ್ವತವಾಗಿ ಪಾರು ಮಾಡಲು ಅಥವಾ ಗೇಟ್ ವೇ ವಿಹಾರಕ್ಕೆ ಅವಕಾಶ ಮಾಡಿಕೊಡುವ ನಿಲ್ದಾಣಗಳಾಗಿವೆ. ಈ ಸತ್ಯವನ್ನು ಅರಿತುಕೊಂಡ ವ್ಯಕ್ತಿಯೊಬ್ಬರು ಶಾಶ್ವತವಾಗಿ ಪಲಾಯನ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ರಾಜಕೀಯ ಪ್ರೇರಿತ ಟೀ ಶರ್ಟ್ ತೊಟ್ಟ ಅಭಿಮಾನಿಗಳು ಹೊರಕ್ಕೆ
ಇದೀಗ 60 ವರ್ಷದ ವೀ ಜಿಯಾಂಗುವೋ ಎಂಬ ಚೀನಿ ವ್ಯಕ್ತಿಯೊಬ್ಬರು ತಮ್ಮ ಕುಟುಂಬದಿಂದ ತಪ್ಪಿಸಿಕೊಳ್ಳಲು 14 ವರ್ಷಗಳ ಹಿಂದೆಯೇ ಬೀಜಿಂಗ್ ಕ್ಯಾಪಿಟಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದರು. ಕುಟುಂಬದಲ್ಲಿದ್ದರೆ ಮದ್ಯ ಹಾಗೂ ಧೂಮಪಾನ ಮಾಡಲಾಗುವುದಿಲ್ಲ ಎಂಬ ಕಾರಣಕ್ಕೇ ಕುಟುಂಬದಿಂದಲೇ ದೂರವಾಗುವ ಪ್ರಯತ್ನಕ್ಕೆ ಮುಂದಾಗಿದ್ದರು. ಇದನ್ನೂ ಓದಿ: ವುಹಾನ್ ನಂತರ ಚೀನಾದಲ್ಲಿ ಅತಿದೊಡ್ಡ ಲಾಕ್‌ಡೌನ್: 2.6 ಕೋಟಿ ಜನ ಮನೆಯಲ್ಲೇ ಲಾಕ್
2008 ರಿಂದಲೂ ವಿಮಾನ ನಿಲ್ದಾಣದ 2 ಟರ್ಮಿನಲ್‌ನಲ್ಲೇ ವಾಸಿಸುತ್ತಿದ್ದ ಅವರು, `ನನಗೆ ಕುಟುಂಬದಲ್ಲಿ ಸ್ವಾತಂತ್ರ‍್ಯವಿಲ್ಲ. ಹಾಗಾಗಿ ನಾನು ಮನೆಗೆ ಹಿಂದಿರುಗಲು ಸಾಧ್ಯವಿಲ್ಲ. ನಾನು ಉಳಿಯಲು ಬಯಸಿದರೆ, ಧೂಮಪಾನ ಮತ್ತು ಮದ್ಯ ಸೇವನೆ ಬಿಡಬೇಕು. ಇಲ್ಲವೇ ಮನೆಯವರಿಗೆ ಒಂದು ತಿಂಗಳ ವೇತನ 1,000 ಯೂರೋವನ್ನು (200 ಡಾಲರ್ ಅಥವಾ 11,923.51 ರೂ.) ನೀಡಬೇಕಾಗಿತ್ತು. ಈ ಹಣವನ್ನು ಅವರಿಗೇ ನೀಡಿದ್ದರೆ ನಾನು ಮದ್ಯ ಮತ್ತು ಸಿಗರೇಟ್ ಅನ್ನು ಹೇಗೆ ಖರೀದಿಸಲಿ. ಅದಕ್ಕಾಗಿ ನಾನು ಮನೆ ತೊರೆಯುವ ಪ್ರಯತ್ನ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.
40ನೇ ವರ್ಷದಲ್ಲಿದ್ದಾಗಲೇ ಜಿಯಾಂಗುವೋ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ವಯಸ್ಸಾಗಿದೆ ಅಂದುಕೊಂಡಿದ್ದ ಅವರು, ಕೆಲಸ ಹುಡುಕುವುದನ್ನು ಬಿಟ್ಟಿದ್ದರು. ಇದೀಗ ಪೊಲೀಸರು ಅವರಿಗೆ ಭದ್ರತೆ ನೀಡಿದ್ದಾರೆ. ಜೊತೆಗೆ ವಾಂಗ್‌ಜಿಂಗ್‌ನಲ್ಲಿರುವ ತಮ್ಮ ಮನೆಗೆ ಆಗಾಗ್ಗೆ ಕರೆದೊಯ್ಯುತ್ತಿದ್ದಾರೆ.
ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ದೀರ್ಘಕಾಲ ಉಳಿಯಲು ನಿರ್ವಹಿಸಿದ ವಿಶ್ವದ ಏಕೈಕ ವ್ಯಕ್ತಿ ಇವರೊಬ್ಬರೇ ಅಲ್ಲ. ಅವರಿಗಿಂತ ದೀರ್ಘಾವಧಿಯ ವಿಮಾನ ನಿಲ್ದಾಣದ ಟರ್ಮಿನಲ್ ಅಧಿಕಾರಾವಧಿ ಹೊಂದಿರುವವರೂ ಇದ್ದಾರೆ. ಬೈರಾಮ್ ಟೆಪೆಲಿ ಎಂಬವರೂ 1991 ರಲ್ಲಿ ಅಟಾತುರ್ಕ್ ವಿಮಾನ ನಿಲ್ದಾಣಕ್ಕೆ ತೆರಳಿ 27 ವರ್ಷಗಳ ಕಾಲ ಅಲ್ಲಿಯೇ ವಾಸಿಸುತ್ತಿದ್ದರು ಎನ್ನಲಾಗಿದೆ.