ಮುಂಬೈ: ಚಲಿಸುತ್ತಿದ್ದ ಸ್ಥಳೀಯ ರೈಲಿನಲ್ಲೇ ಅಪ್ರಾಪ್ತೆಗೆ ಕಿರುಕುಳ ನೀಡಿದ್ದ ಆರೋಪಿಯನ್ನು ನಗರದ ಕೇಂದ್ರ ರೈಲ್ವೆ ಪೊಲೀಸರು (ಜಿಆರ್ ಪಿ) ಬಂಧಿಸಿದ್ದಾರೆ.
ವಿರಾಜ್ ಪಾಂಡೆ ಬಂಧಿತ ಆರೋಪಿ. ದಾದರ್ ಮತ್ತು ಪ್ರಭಾದೇವಿ ರೈಲ್ವೆ ನಿಲ್ದಾಣಗಳ ನಡುವೆ ಈ ಘಟನೆ ನಡೆದಿದ್ದು, ಆರೋಪಿಯನ್ನು ಬೊರಿವಲಿಯ ನಿವಾಸಿ ಎಂದು ಗುರುತಿಸಲಾಗಿದೆ.
Advertisement
ಅಪ್ರಾಪ್ತ ಹುಡುಗಿ ತನ್ನ ಸಂಬಂಧಿಕರ ಜೊತೆ ಪ್ರಯಾಣಿಸುತ್ತಿದ್ದಳು. ರೈಲು ದಾದರ್ ರೈಲ್ವೇ ನಿಲ್ದಾಣದಿಂದ ಹೊರಟ್ಟಿತ್ತು. ಈ ವೇಳೆ ಆರೋಪಿ ವಿರಾಜ್ ಪಾಂಡೆ ಅಪ್ರಾಪ್ತೆಯನ್ನು ಅನುಚಿತವಾಗಿ ಮುಟ್ಟಿದ್ದಾನೆ ಎಂದು ಹಿರಿಯ ಇನ್ಸ್ ಪೆಕ್ಟರ್ ಶೈಲೇಂದ್ರ ಧಿವಾರ್ ತಿಳಿಸಿದ್ದಾರೆ.
Advertisement
Advertisement
ಅಪ್ರಾಪ್ತೆ ಆಕೆಯ ಸಂಬಂಧಿ ಪಕ್ಕ ಕುಳಿತಿದ್ದಳು. ಆಗ ಆರೋಪಿ ಬಂದು ಆಕೆಯ ಪಕ್ಕದಲ್ಲಿ ಕುಳಿತುಕೊಂಡನು. ಬಳಿಕ ಆರೋಪಿ ಹುಡುಗಿಯ ತೊಡೆಗಳ ಮೇಲೆ ಕೈ ಹಾಕಿದ್ದಾನೆ. ತಕ್ಷಣ ಸಂತ್ರಸ್ತೆ ಈ ಬಗ್ಗೆ ಚಿಕ್ಕಪ್ಪನಿಗೆ ತಿಳಿಸಿದ್ದಾಳೆ. ಸಂತ್ರಸ್ತೆ ಚಿಕ್ಕಪ್ಪನಿಗೆ ತಿಳಿಸುತ್ತಿದ್ದಂತೆ ಆರೋಪಿ ಪ್ರಯಾಣಿಕರನ್ನು ತಳ್ಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದನು. ಅಷ್ಟರಲ್ಲಿ ಪ್ರಯಾಣಿಕರೊಬ್ಬರು ರೈಲ್ವೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.
Advertisement
ಮಾಹಿತಿ ತಿಳಿದ ಪೊಲೀಸರು ಮುಂಬೈ ಕೇಂದ್ರ ನಿಲ್ದಾಣದಲ್ಲಿ ಆರೋಪಿಗಾಗಿ ಕಾಯುತ್ತಿದ್ದು, ಆರೋಪಿ ಬರುತ್ತಿದ್ದಂತೆ ಆತನನ್ನು ಬಂಧಿಸಿದ್ದಾರೆ. ಸದ್ಯಕ್ಕೆ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ ಪೋಕ್ಸೋ ಕಾಯ್ಡೆಯಡಿ ಪ್ರಕರಣವನ್ನು ಪೊಲೀಸರು ದಾಖಲಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv