ವಾಷಿಂಗ್ಟನ್: ಫೋನನ್ನು ವ್ಯಕ್ತಿ ನುಂಗಿದ್ದು, ಆಪರೇಷನ್ ಮೂಲಕವಾಗಿ ಹೊರಗೆ ತೆಗೆದಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ.
33 ವರ್ಷದ ಫಿನ್ನಿಷ್ ಕಫನಿಯ ಮಾಜಿ ಊದ್ಯೋಗಿ ಫೋನ್ ನುಂಗಿದ್ದ ವ್ಯಕ್ತಿಯಾಗಿದ್ದಾನೆ. ಮೊಬೈಲ್ ನಾಲ್ಕು ದಿನಗಳಕಾಲ ವ್ಯಕ್ತಿಯ ಹೊಟ್ಟೆಯಲ್ಲಿ ಇತ್ತು. ಮೊಬೈಲ್ ಡೈಜೆಸ್ಟ್ ಆಗಿಲ್ಲ. ಹೀಗಾಗಿ ಆಪರೇಷನ್ ಮೂಲಕವಾಗಿ ಹೊರತಗೆ ತೆಗೆಯಬೇಕಾಯಿತ್ತು. ಮೂಬೈಲ್ ಬ್ಯಾಟರಿಯಲ್ಲಿರುವ ಕೊರ್ರೊಸಿವ್ ಆ್ಯಸಿಡ್ ಲೀಕ್ ಆಗುವ ಸಾಧ್ಯತೆ ಇತ್ತು. ಇದರಿಂದ ಪ್ರಾಣವೇ ಹೋಗುವ ಸಾಧ್ಯತೆ ಇತ್ತು ಎಂದು ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ: ಒಟ್ಟಾಗಿ ಹೋಗೋಣವೆಂದು ಹೆಚ್‍ಡಿಕೆಗೆ ಹೇಳಿದ್ದೇನೆ: ಮೈತ್ರಿ ಬಗ್ಗೆ ಸಿಎಂ ಸ್ಪಷ್ಟನೆ
Advertisement
Advertisement
ಹೊಟ್ಟೆಯೊಳಗೆ ಮೊಬೈಲ್ ಮೂರು ತುಂಡುಗಳಾಗಿರುವುದು ಸ್ಕ್ಯಾನ್‍ನಲ್ಲಿ ಕಾಣಿಸಿಕೊಂಡಿತ್ತು. ನಂತರ ವೈದ್ಯರು ಆಪರೇಷನ್ ಪ್ರಾರಂಭಿಸಿದ್ದಾರೆ. ಇದೀಗ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತ ಯಾವ ಕಾರಣಕ್ಕಾಗಿ ಮೊಬೈಲ್ ನುಂಗಿದ್ದಾನೆ ಎಂಬುದಕ್ಕೆ ಕಾರಣ ತಿಳಿದು ಬಂದಿಲ್ಲ.