Uncategorized

ಜಸ್ಟ್ ಮಿಸ್: ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯ ಹಿಂದೆಯೇ ಕಟ್ಟಡ ಕುಸಿದರೂ ಹೇಗೆ ಪಾರಾದ್ರು ನೋಡಿ

ಬೀಜಿಂಗ್: ಕೂದಲೆಳೆ ಅಂತರದಲ್ಲಿ ಪಾರಾದ್ರು, ಸಾವಿನ ಕದ ತಟ್ಟಿ ಬಂದ್ರು, ಪವಾಡ ಸದೃಶವಾಗಿ ಬುದಕುಳಿದ್ರು- ಈ ಎಲ್ಲಾ ಮಾತುಗಳಿಗೆ ಈ ಘಟನೆ ಉದಾಹರಣೆ. ಚೀನಾದಲ್ಲಿ ವ್ಯಕ್ತಿಯೊಬ್ಬರು ರಸ್ತೆ ದಾಟುತ್ತಿದ್ದ ವೇಳೆ ಅವರ ಹಿಂದಿದ್ದ ಕಟ್ಟಡ ಕುಸಿದು ಬಿದ್ದಿದ್ದು, ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಳೆದ ವಾರ ಸೆಂಟ್ರಲ್ ಚೀನಾದ ಜಿಯಾಂಶಿ ಕೌಂಟಿಯಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬರು ರಸ್ತೆ ದಾಟಲು ನಿಂತಿದ್ದರು. ಅವರು ಒಂದೆರಡು ಹೆಜ್ಜೆ ಮುಂದೆ ಹೋಗುತ್ತಿದ್ದಂತೆ ಹಿಂದೆ ಇದ್ದ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದಿದೆ. ಕೂಡಲೇ ಆ ವ್ಯಕ್ತಿ ಓಡಿ ರಸ್ತೆಯ ಮತ್ತೊಂದು ಬದಿಗೆ ತಲುಪಿ ಬಚಾವಾಗಿದ್ದಾರೆ.

ನಂತರ ಕಟ್ಟಡದ ಅವಶೇಷಗಳಿಂದ ದಟ್ಟವಾದ ಧೂಳು ಮೇಲೇಳೋದನ್ನ ಕಾಣಬಹುದು. ಈ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಸೈಕಲ್ ರಿಕ್ಷಾ ಧೂಳಿನ ಮಧ್ಯೆ ಸಿಲುಕಿದೆ. ಆದ್ರೆ ರಸ್ತೆ ದಾಟಲು ನಿಂತಿದ್ದ ವ್ಯಕ್ತಿ ಕಟ್ಟಡ ತನ್ನ ಮೇಲೆ ಕುಸಿದು ಬೀಳೋದ್ರಿಂದ ಪಾರಾಗಿದ್ದಾರೆ. ಈ ಎಲ್ಲಾ ದೃಶ್ಯ ಕಾರಿನಲ್ಲಿದ್ದ ಡ್ಯಾಶ್‍ಕ್ಯಾಮ್‍ನಲ್ಲಿ ಸೆರೆಯಾಗಿದೆ.

ಆದ್ರೆ ಎಲ್ಲರೂ ಈ ವ್ಯಕ್ತಿಯಂತೆಯೇ ಅದೃಷ್ಟವಂತರಾಗಿರಲಿಲ್ಲ. ಈ ಘಟನೆಯಲ್ಲಿ ಕನಿಷ್ಟ 5 ಮಂದಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಇಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ. ಕುಸಿದು ಬಿದ್ದ ಕಟ್ಟಡ ಸ್ಥಳೀಯ ಬ್ಯಾಂಕ್‍ಗೆ ಸೇರಿದ್ದು ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದ್ದು, 6 ಮಂದಿಯನ್ನ ಬಂಧಿಸಲಾಗಿದೆ.

Leave a Reply

Your email address will not be published. Required fields are marked *

Back to top button