ಗಾಂಧೀನಗರ: ಗುಜರಾತ್‍ನ ವಡೋದರಾ ಜಿಲ್ಲೆಯ ನದಿಯಲ್ಲಿ ಮೊಸಳೆಯೊಂದು 30 ವರ್ಷದ ವ್ಯಕ್ತಿಯನ್ನು ಕೊಚ್ಚಿ ಸಾಯಿಸಿದ್ದು, ಹಲವಾರು ಗಂಟೆಗಳ ನಂತರ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಇಮ್ರಾನ್ ದಿವಾನ್ ಎಂದು ಗುರುತಿಸಲಾಗಿದ್ದು, ಈತ ಸೋಖ್ದಾರಗು ಗ್ರಾಮದ ನಿವಾಸಿಯಾಗಿದ್ದಾನೆ. ಭಾನುವಾರ ಮಧ್ಯಾಹ್ನ ಪದ್ರಾ ತಾಲೂಕಿನ ಸೋಖ್ದಾರಗು ಗ್ರಾಮದ ಬಳಿಯ ಧಧಾರ್ ನದಿಯಲ್ಲಿ ಈ ಘಟನೆ ನಡೆದಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ರವಿರಾಜಸಿಂಹ ರಾಥೋಡ್ ಹೇಳಿದ್ದಾರೆ. ಇದನ್ನೂ ಓದಿ: 10ರ ಮಗಳು, ತಾಯಿ ಪ್ರತ್ಯೇಕ ಕೋಣೆಯಲ್ಲಿ ನೇಣಿಗೆ ಶರಣು – ಪ್ರೀತಿಸಿ ಮದ್ವೆಯಾಗಿದ್ದ ವೈದ್ಯ ದಂಪತಿ
Advertisement
Advertisement
ವ್ಯಕ್ತಿಯನ್ನು ಮೊಸಳೆ ನದಿಗೆ ಎಳೆದೊಯ್ದಿದ್ದು, ನಂತರ ಆತನ ದೇಹ ನೀರಿನಲ್ಲಿ ಕಣ್ಮರೆಯಾಗುತ್ತಾ, ಮತ್ತೆ ಮರುಕಳಿಸುತ್ತಿತ್ತು. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಫೋನ್‍ಗಳಲ್ಲಿ ಸೆರೆಹಿಡಿದಿದ್ದರು. ನಂತರ ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಶೋಧ ಕಾರ್ಯಾಚರಣೆ ಪ್ರಾರಂಭಿಸಿದರು. ಕೊನೆಗೆ ರಾತ್ರಿ 10 ಗಂಟೆ ಸುಮಾರಿಗೆ ಮೃತದೇಹವನ್ನು ನದಿಯಿಂದ ಹೊರಗೆ ತೆರೆಯಲಾಯಿತು. ವ್ಯಕ್ತಿ ದೇಹದ ಮೇಲೆ ಮತ್ತು ಭುಜದ ಮೇಲೆ ಕಚ್ಚಿದ್ದ ಗುರುತು ಪತ್ತೆಯಾಗಿದ್ದು, ವ್ಯಕ್ತಿ ನದಿಯಲ್ಲಿ ಹೇಗೆ ಸಾವನ್ನಪ್ಪಿದ್ದರು ಎಂಬುವುದನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಈಗಾಗಲೇ ನೀರಿನಲ್ಲಿದ್ದ ವ್ಯಕ್ತಿ ಮೇಲೆ ಮೊಸಳೆ ದಾಳಿ ಮಾಡಿದ್ದನ್ನು ಸ್ಥಳೀಯರು ನೋಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಮಹಿಳೆ ಅರೆಸ್ಟ್