ಮುಂಬೈ: ವ್ಯಕ್ತಿಯೊಬ್ಬ ಮಹಿಳಾ ಸ್ಕ್ರಿಪ್ಟ್ ಬರಹಗಾರರೊಬ್ಬರಿಗೆ ವಿಡಿಯೋ ಕಾಲ್ ಮಾಡಿ ಹಸ್ತಮೈಥುನ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ವಿಡಿಯೋ ಕಾಲ್ ಮಾಡಿದ್ದ ಆರೋಪಿಯ ಮುಖ ಸರಿಯಾಗಿ ಕಾಣಿಸುತ್ತಿರಲಿಲ್ಲ ಎಂದು ಮಹಿಳೆ ಹೇಳಿದ್ದಾರೆ. ತಕ್ಷಣ ಮಹಿಳೆ ಮುಂಬೈ ಪೊಲೀಸರಿಗೆ ಟ್ವೀಟ್ ಮಾಡಿ ಈ ಘಟನೆಯ ಬಗ್ಗೆ ಮಾಹಿತಿ ನೀಡಿ ಆನ್‍ಲೈನ್‍ನಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಪೊಲೀಸರು ಎಫ್‍ಐಆರ್ ದಾಖಲಿಸಲು ಖಾರ್ ಪೊಲೀಸ್ ಠಾಣೆಗೆ ಬರುವಂತೆ ಹೇಳಿದ್ದಾರೆ. ಅದರಂತೆಯೇ ಈ ಸಂಬಂಧ ಶನಿವಾರ ಬೆಳಗ್ಗೆ ಖಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಏನಿದೆ?
ನಾನು ಮನೆಯಲ್ಲಿದ್ದಾಗ ಸಂಜೆ 4.21ಕ್ಕೆ ಸ್ಕೈಪ್ ಕರೆ ಬಂದಿತ್ತು. ನಾನು ರಿಸೀವ್ ಮಾಡಿದೆ. ಆಗ ಆತ ನನಗೆ ತನ್ನ ಖಾಸಗಿ ಅಂಗ ತೋರಿಸಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದನು. ಆತನ ಮುಖ ನೋಡಲು ಪ್ರಯತ್ನಿಸಿದೆ. ಆದರೆ ಆ ವ್ಯಕ್ತಿಯ ಮುಖವನ್ನು ನೋಡಲು ನನಗೆ ಸಾಧ್ಯವಾಗಲಿಲ್ಲ. ಕೊನೆಗೆ ಈ ಬಗ್ಗೆ ದೂರು ನೀಡಲು ನಾನು ಸ್ಕ್ರೀನ್‍ಶಾಟ್‍ಗಳನ್ನು ತೆಗೆದುಕೊಂಡು ಕರೆಯ ಸಂಪರ್ಕ ಕಡಿತಗೊಳಿಸಿದೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.
ಈ ರೀತಿಯ ಘಟನೆ ಇದೇ ಮೊದಲನೆಯದು. ಆನ್‍ಲೈನ್‍ನಲ್ಲಿ ಹಸ್ತಮೈಥುನ ಮಾಡಿದ ವ್ಯಕ್ತಿಯ ವಿರುದ್ಧ ದಾಖಲಾದ ಮೊದಲ ಪ್ರಕರಣ ಇದಾಗಿದೆ. ಸಾಮಾನ್ಯವಾಗಿ ರಸ್ತೆಯಲ್ಲಿ ಇಂತಹ ಘಟನೆ ಸಂಭವಿಸುತ್ತವೆ. ಈ ಬಗ್ಗೆ ನಮಗೆ ದೂರುಗಳು ಬರುತ್ತವೆ. ಸದ್ಯಕ್ಕೆ ಆರೋಪಿಯ ನಂಬರ್ ಪತ್ತೆ ಮಾಡಲು ನಾವು ಸೈಬರ್ ಪೊಲೀಸರ ಸಹಾಯವನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಪರಿಚಿತ ಆರೋಪಿಯ ಮೇಲೆ ಐಪಿಸಿ ಸೆಕ್ಷನ್ ಮತ್ತು ಮಾಹಿತಿ ತಂತ್ರಜ್ಞಾನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣವನ್ನು ಕುರಿತು ಖಾರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮುಂಬೈ ಪೊಲೀಸ್ ವಕ್ತಾರ ಡಿಸಿಪಿ ಮಂಜುನಾಥ್ ಸಿಂಗೇ ಹೇಳಿದ್ದಾರೆ.