ಪಾಟ್ನಾ: ವ್ಯಕ್ತಿಯೊಬ್ಬ ತನ್ನ ಪತ್ನಿ ಸಂತೋಷದಿಂದ ಇರಬೇಕು ಎಂದು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ್ದಾನೆ. ಅಷ್ಟೇ ಅಲ್ಲದೇ ತಮ್ಮಿಬ್ಬರ ದಾಂಪತ್ಯದಲ್ಲಿ ಹುಟ್ಟಿದ ಎರಡೂವರೆ ವರ್ಷದ ಮಗುವನ್ನು ಉಡುಗೊರೆಯಾಗಿ ನೀಡಿರುವ ಘಟನೆ ಬಿಹಾರದ ಭಗಲ್ಪುರ್ ಜಿಲ್ಲೆಯಲ್ಲಿ ನಡೆದಿದೆ.
ಭಾಗಲ್ಪುರದ ಬಳಿಯ ಸೋಲೇಪುರ ಗ್ರಾಮದಲ್ಲಿ ಈ ಅಪರೂಪದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಎರಡು ದಿನಗಳ ಹಿಂದೆ ಭಗಲ್ಪುರ ಜಿಲ್ಲೆಯ ಜಗದೀಶ್ಪುರ ಬ್ಲಾಕ್‍ನಲ್ಲಿ ಮದುವೆ ನಡೆದಿದೆ.
Advertisement
Advertisement
ಘಟನೆಯ ವಿವರ?
ಭಗಲ್ಪುರ ಜಿಲ್ಲೆಯ ನಿವಾಸಿ ನಾಲ್ಕು ವರ್ಷಗಳ ಹಿಂದೆ ಜಾರ್ಖಂಡನ ಗೊಡ್ಡಾ ಜಿಲ್ಲೆಯ ಗ್ರಾಮವೊಂದರ ಯುವತಿಯನ್ನು ಮದುವೆಯಾಗಿದ್ದನು. ದಂಪತಿಗೆ ಒಂದು ಮಗುವಿತ್ತು. ಕುಟುಂಬ ಸಮೇತರಾಗಿ ಪಟ್ಟಣದ ಸೋಲೇಪುರ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಕೆಲ ದಿನಗಳ ಬಳಿಕ ಆತ ಪ್ರಕರಣವೊಂದರಲ್ಲಿ ಸಿಲುಕಿ ಜೈಲಿಗೆ ಹೋಗಿದ್ದನು. ಈ ಸಂದರ್ಭದಲ್ಲಿ ಆತನ ಪತ್ನಿ ಮತ್ತು ಮನೆ ಮಾಲೀಕನ ಮಗ ಮೊನು ಕುಮಾರ್ ಸಿಂಗ್ ನಡುವೆ ಸ್ನೇಹ ಬೆಳೆಯಿತು.
Advertisement
Advertisement
ಇಬ್ಬರೂ ಆಗಾಗ ಭೇಟಿಯಾಗಿ ಮಾತನಾಡಲು ಶುರುಮಾಡಿದ್ದರು. ದಿನ ಕಳೆದಂತೆ ಸ್ನೇಹ ಪ್ರೀತಿಯಾಗಿ ಪರಸ್ಪರ ಇಬ್ಬರು ಪ್ರೀತಿಸುತ್ತಿದ್ದರು. ಬಳಿಕ ಇಬ್ಬರು ಒಟ್ಟಿಗೆ ಜೀವಿಸಲು ನಿರ್ಧಾರ ಮಾಡಿದ್ದರು. ಇತ್ತ ಮಹಿಳೆಯ ಪತಿ ಜೈಲಿನಿಂದ ಮನೆಗೆ ಹಿಂದಿರುಗಿದ್ದಾನೆ. ಆಗ ತನ್ನ ಪತ್ನಿ ಮತ್ತು ಮೊನು ಕುಮಾರ್ ಸಿಂಗ್ ನಡುವಿನ ಸಂಬಂಧ ತಿಳಿದು ಆಘಾತಕ್ಕೊಳಗಾಗಿದ್ದನು. ಆದರೂ ಆತ ಪತ್ನಿಯ ಮನವೊಲಿಸಲು ಪ್ರಯತ್ನಿಸಿದ್ದಾನೆ. ಆದರೆ ಆಕೆ ತನ್ನ ಪ್ರಿಯಕರನ ಜೊತೆಗೆ ಜೀವಿಸಲು ನಿರ್ಧಾರ ಮಾಡಿದ್ದಳು.
ಕೊನೆಗೆ ಪತಿ ಗ್ರಾಮ ನ್ಯಾಯಾಲಯದಲ್ಲಿ ಇಬ್ಬರು ಕುಟುಂಬದ ಒಪ್ಪಿಗೆಯೊಂದಿಗೆ ಸ್ಥಳೀಯ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಮೊನು ಕುಮಾರ್ ಸಿಂಗ್ ಜೊತೆ ತನ್ನ ಪತ್ನಿಯ ಮದುವೆ ಮಾಡಿಸಿದ್ದಾನೆ.