ಮುಂಬೈ: ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಯುವತಿಯನ್ನು ಆಕೆಯ ಪ್ರಿಯತಮ ಮದುವೆಯಾಗಿ ನಂತರ ಪರಾರಿಯಾದ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿದೆ.
ಪ್ರಿಯತಮ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಮನನೊಂದು ಆಕೆ ತನ್ನ ಜೀವನವನ್ನು ಕೊನೆಗೊಳಿಸಲು ನಿರ್ಧಾರ ಮಾಡಿದಳು. ಹಾಗೆಯೇ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಇಲ್ಲಿಗೆ ಯುವಕನನ್ನು ಕರೆತಂದು ಆಕೆಯ ಜೊತೆ ಒತ್ತಾಯಪೂರ್ವಕವಾಗಿ ಮದುವೆ ಮಾಡಿಕೊಡಲಾಯಿತು. ಆದರೆ ಮದುವೆಯಾದ ಕೂಡಲೇ ಆತ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.
Advertisement
Maharashtra: A man was made to marry his girlfriend at a hospital in Pune's Chakan yesterday. The girl was admitted there after she attempted suicide when the man allegedly refused to marry her. The man however managed to escape from the hospital soon after the wedding. (05.12) pic.twitter.com/voc4SFl19Q
— ANI (@ANI) December 6, 2019
Advertisement
ಇತ್ತ ಯುವತಿ, ಯುವಕನ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದಾಳೆ. ಆರೋಪಿ ಸೂರಜ್ ನಲ್ವಾಡೆ ವಿರುದ್ಧ ಎಫ್‍ಐ ಆರ್ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ ಎಂದು ತನಿಖಾಧಿಕಾರಿ ಪ್ರಕಾಶ್ ರಾಥೋರ್ ತಿಳಿಸಿದ್ದಾರೆ.
Advertisement
ದೂರಿನಲ್ಲೇನಿದೆ?
ಸೂರಜ್ ನನ್ನ ಮೇಲೆ ಒತ್ತಾಯಪೂರ್ವಕವಾಗಿ ದೈಹಿಕ ಸಂಬಂಧ ಬೆಳೆಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಅಲ್ಲದೆ ಆ ಬಳಿಕ ನಾನು ಕೆಳಜಾತಿಯವಳೆಂದು ಹೇಳಿ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಾನೆ ಎಂದು ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.
Advertisement
ಯುವತಿ ನವೆಂಬರ್ 27ರಂದು ವಿಷ ಸೇವಿಸಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು.
Investigating officer Prakash Rathore says, "An FIR has been lodged against the man Suraj Nalwade, under IPC section 376 (punishment for rape). We are looking for him." #Maharashtra https://t.co/V9kEd4vt8Z pic.twitter.com/eIslugyJoG
— ANI (@ANI) December 6, 2019