ಕೋಲ್ಕತ್ತಾ: ಟ್ರೈನಿನಲ್ಲಿ ಯುವತಿಯನ್ನು ನೋಡಿ ಲವ್ ಅಟ್ ಫಸ್ಟ್ ಸೈಟ್ ಆದ ಯುವಕನೊಬ್ಬ ಆಕೆಯನ್ನು ಹುಡುಕಲು ಒಂದು ಸಿನಿಮಾ ಮಾಡಿ 4,000 ಪೋಸ್ಟರ್ ಅಂಟಿಸಿದ ಪ್ರಕರಣವೊಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಬೆಳಕಿಗೆ ಬಂದಿದೆ.
ಬಿಸ್ವಜಿತ್ ಪೊದಾರ್(29) ಕೋಲ್ಕತ್ತಾದಲ್ಲಿ ಸರ್ಕಾರಿ ಕೆಲಸ ಮಾಡುತ್ತಿದ್ದಾರೆ. ಬುಸ್ವಜಿತ್ ಜುಲೈ ತಿಂಗಳಿನಲ್ಲಿ ಕೆಲಸದಿಂದ ಮನೆಗೆ ಹಿಂತಿರುಗುವ ವೇಳೆ ರೈಲಿನಲ್ಲಿ ತನ್ನ ಮುಂದೆ ಯುವತಿ ಪೋಷಕರ ಜೊತೆ ಕುಳಿತ್ತಿದ್ದಳು. ಆ ಯುವತಿಯನ್ನು ನೋಡಿದ ಮೊದಲ ನೋಟದಲ್ಲೇ ಬಿಸ್ವಜಿತ್‍ಗೆ ಆಕೆಯ ಮೇಲೆ ಪ್ರೀತಿಯಾಗಿದೆ.
Advertisement
ಬಿಸ್ವಜಿತ್‍ಗೆ ಆ ಯುವತಿ ಮೇಲೆ ಮೊದಲ ನೋಟದಲ್ಲೇ ಪ್ರೀತಿಯಾಗಿದ್ದು, ಈಗ ಆ ಯುವತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಯುವತಿಯನ್ನು ಹುಡುಕಲು ಬಿಸ್ವಜಿತ್ 4,000 ಪೋಸ್ಟರ್ ಗಳನ್ನು ಅಂಟಿಸಿದ್ದಾರೆ. ಆ ಪೋಸ್ಟರ್ ನಲ್ಲಿ ಬಿಸ್ವಜಿತ್ ತನ್ನ ಮೊಬೈಲ್ ನಂಬರ್ ಹಾಗೂ ತನ್ನ ಸಿನಿಮಾದ ಯೂಟ್ಯೂಬ್ ಲಿಂಕ್ ಕೂಡ ಹಾಕಿದ್ದಾನೆ.
Advertisement
Advertisement
ಯುವತಿ ಈ ಪೋಸ್ಟರ್ ನೋಡಿ ನಾನು ಆಕೆಯನ್ನು ಹುಡುಕುತ್ತಿದ್ದೇನೆ ಎಂಬುದು ಗೊತ್ತಾಗಲಿ ಎಂಬ ಉದ್ದೇಶದಿಂದ ನಾನು ಈ ರೀತಿ ಮಾಡುತ್ತಿದ್ದೇನೆ. ನಾನು ಆಕೆಯನ್ನು ಹುಡುಕುತ್ತಿದ್ದೇನೆ ಹಾಗೂ ಆಕೆಗೆ ಇಷ್ಟವಿದ್ದರೆ ಆಕೆ ನನ್ನನ್ನು ಸಂರ್ಪಕಿಸಲಿ ಎಂದು ಬಿಸ್ವಜಿತ್ ಪ್ರತಿಕ್ರಿಯಿಸಿದ್ದಾರೆ.
Advertisement
ಆ ಯುವತಿಯನ್ನು ಹುಡುಕಲು ಬಿಸ್ವಜಿತ್ ಒಂದು ಕಿರುಚಿತ್ರವನ್ನು ಕೂಡ ಮಾಡಿದ್ದಾರೆ. ಆ ಚಿತ್ರಕ್ಕೆ ‘ಕೋನ್‍ಗರ್ ಕೋನೆ’ ಎಂದು ಹೆಸರಿಟ್ಟಿದ್ದಾರೆ. ಬೆಂಗಾಲಿಯಲ್ಲಿ ಕೋನ್‍ಗರ್ ಕೋನೆ ಎಂದರೆ ‘ಕೋನ್‍ಗರ್ ನ ವಧು’ ಎಂದರ್ಥ. ಈ ಕಿರುಚಿತ್ರ 6 ನಿಮಿಷ 23 ಸೆಕೆಂಡ್‍ಗಳಿದ್ದು, ಬಿಸ್ವಜಿತ್ ಈ ಚಿತ್ರದಲ್ಲಿ ಯುವತಿಗೆ ವಿಶೇಷ ಸಂದೇಶವನ್ನು ನೀಡಿದ್ದಾರೆ.
ಬಿಸ್ವಜಿತ್ ಆ ಯುವತಿಯನ್ನು ಪ್ರೀತಿಸುತ್ತಿರುವುದು ಹಾಗೂ ಭೇಟಿಯಾಗಲೂ ಕಾತುರದಿಂದ ಕಾಯುತ್ತಿರುವುದನ್ನು ಈ ಕಿರುಚಿತ್ರದಲ್ಲಿ ತೋರಿಸಲಾಗಿದೆ. ಈ ಚಿತ್ರದಲ್ಲಿ ಆ ಯುವತಿಯ ಪಾತ್ರವನ್ನು ಬಿಸ್ವಜಿತ್‍ರ ಸ್ನೇಹಿತೆ ಅಭಿನಯಿಸಿದ್ದಾರೆ. ಈ ಚಿತ್ರದ ಕೊನೆಯಲ್ಲಿ “ನೀವು ಈ ಕಿರುಚಿತ್ರ ನೋಡಿದರೆ ನನಗೆ ಸಂರ್ಪಕಿಸಿ” ಎಂದು ಬಿಸ್ವಜಿತ್ ತಿಳಿಸಿದ್ದಾರೆ. ಯುವತಿ ತನ್ನನ್ನು ಗುರುತಿಸಲಿ ಎಂದು ಬಿಸ್ವಜಿತ್ ಆಕೆಯನ್ನು ಭೇಟಿ ಮಾಡಿದ ದಿನ ಧರಿಸಿದ ಟಿ-ಶರ್ಟ್ ಅನ್ನು ಇದೂವರೆಗೂ ತೆಗೆಯಲಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ಹಿಂದೆ ಪುಣೆಯಲ್ಲಿ ನಿಲೇಶ್ ಖೇಡೇಕರ್ ಎಂಬಾತ ಮುನಿಸಿಕೊಂಡಿದ್ದ ಪ್ರೇಯಸಿಯನ್ನು ಒಲಿಸಿಕೊಳ್ಳಲು ಬರೋಬ್ಬರಿ 300 ಸಾರಿ ಬ್ಯಾನರ್ ಗಳನ್ನು ರಸ್ತೆಯಲ್ಲಿ ಹಾಕಿದ್ದನು. ನಿಲೇಶ್ ಓರ್ವ ಉದ್ಯಮಿ ಆಗಿದ್ದು, ಮಹಾರಾಷ್ಟ್ರದ ಪಿಂಪ್ರಿ ಚಿಂಚ್ವಾಡ್ ನಲ್ಲಿ ಪ್ರದೇಶದಲ್ಲಿ ಮುನಿಸಿಕೊಂಡಿದ್ದ ಪ್ರೇಯಸಿಯನ್ನು ಒಲಿಸಿಕೊಳ್ಳಲು ಸಾರಿ ಬ್ಯಾನರ್ ಹಾಕುವುದರ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv