ನವದೆಹಲಿ: ವ್ಯಕ್ತಿಯೊಬ್ಬ ಚಿಲ್ಲಿ ಐಸ್‍ಕ್ರಿಮ್ ತಯಾರಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಚಿಲ್ಲಿ ಜಿಲೆಬಿ, ಐಸ್‍ಕ್ರಿಮ್ ವಡಾ ಪಾವ್ ಮತ್ತು ಮ್ಯಾಗಿ ಪಾನಿಪುರಿ, ಅಂತಹ ವಿಚಿತ್ರ ಆಹಾರ ಪ್ರವೃತ್ತಿ ನಿಮಗೆ ಗೊತ್ತಿರಬಹುದು. ಆದರೆ ಈ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ವಿಲಕ್ಷಣ ಆಹಾರವನ್ನು ತಯಾರಿಸಿದ್ದು, ಮೆಣಸಿನಕಾಯಿ ಮತ್ತು ನುಟೆಲ್ಲಾದೊಂದಿಗೆ ಐಸ್ ಕ್ರಿಮ್ ತಯಾರಿಸಿದ್ದಾನೆ. ಇದನ್ನೂ ಓದಿ: ಫಟಾಫಟ್ ಆಗಿ ಮಾಡಿ ಶಾವಿಗೆ ಉಪ್ಪಿಟ್ಟು
ಮಧ್ಯಪ್ರದೇಶದ ಇಂದೋರ್‌ನ ವ್ಯಕ್ತಿಯೊಬ್ಬ ಮೆಣಸಿನಕಾಯಿ ಮತ್ತು ನುಟೆಲ್ಲಾದಂತಹ ಹಲವಾರು ಫ್ಲೆವರ್ಸ್‍ಗಳನ್ನು ಬಳಸಿಕೊಂಡು ಐಸ್ ಕ್ರಿಮ್ ತಯಾರಿಸಿದ್ದಾನೆ.
ವ್ಯಕ್ತಿಯು ಸಮತಟ್ಟಾದ ಮೇಲ್ಮೈಯಲ್ಲಿ ಮೆಣಸಿನಕಾಯಿಯನ್ನು ತುಂಡು ತುಂಡಾಗಿ ಕತ್ತರಿಸಿ, ನಂತರ ಅವರು ಹಾಲಿನ ಕೆನೆಯನ್ನು ಹಾಕದೇ ಮೆಣಸಿನಕಾಯಿಗಳಿಗೆ ನುಟೆಲ್ಲಾ ಚಾಕೋಲೆಟ್ ಅನ್ನು ಹಾಕಿದ್ದಾನೆ. ನಂತರ ಹಲವಾರು ಫ್ಲೆವರ್ಸ್‍ಗಳನ್ನು ಮಿಶ್ರಣ ಮಾಡಿ ಐಸ್ ಕ್ರಿಮ್‍ನ್ನು ತಯಾರಿಸಿದ್ದಾನೆ. ಇದನ್ನೂ ಓದಿ: ಆಂಧ್ರದಲ್ಲಿ ಒಂದು ವರ್ಷ ಗುಟ್ಕಾ, ಪಾನ್ ಮಸಾಲ ನಿಷೇಧ
ಈ ಮಿಶ್ರಣವನ್ನು ರೋಲ್‍ಗಳಾಗಿ ತಯಾರಿಸಿ ಬಳಿಕ ರೋಲ್‍ಗಳ ಮೇಲೆ ಮೆಣಸಿನಕಾಯಿಗಳನ್ನು ಇರಿಸಿ ಅಲಂಕರಿಸಿದ್ದಾನೆ. ಈ ವಿಡಿಯೋ ನೋಡಿದ ಜನರು ಮಿಶ್ರ ಪ್ರತಿಕ್ರಿಯೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ.