ಭೋಪಾಲ್: ಕೌಂಟುಂಬಿಕ ಕಲಹದಿಂದ ಮನನೊಂದು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ರಾಕೇಶ್ ಜಾತವ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಈತ ಭೋಪಾಲ್‌ನ ಪಂಪಾಪುರ ಬಸ್ತಿ ನಿವಾಸಿಯಾಗಿದ್ದ. ಈತ ತನ್ನ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದ. ಇದರಿಂದ ಮನನೊಂದು ರೈಲಿಗೆ ತಲೆಗೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ವ್ಯಕ್ತಿಯು ಸಾವಿಗೆ ಶರಣಾಗುವ ಮೊದಲು ವೀಡಿಯೋವನ್ನು ಮಾಡಿದ್ದ.
ರಾಕೇಶ್ ಪತ್ನಿ ಬಾಲ್ಯದ ಸ್ನೇಹಿತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ್ದ. ಇದರಿಂದಾಗಿ ಪ್ರತಿನಿತ್ಯ ಇಬ್ಬರ ನಡುವೆ ಜಗಳವಾಗುತ್ತಿತ್ತು. ಇಬ್ಬರ ನಡುವಿನ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಆದರೆ ಪೊಲೀಸರು ಯಾವುದೇ ಕ್ರಮಕೈಗೊಂಡಿರಲಿಲ್ಲ. ಕೊನೆಗೆ ವ್ಯಕ್ತಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: 29 ವರ್ಷದ ಬಳಿಕ ಪಾಕಿಸ್ತಾನದ ಜೈಲಿನಿಂದ ತಾಯಿನಾಡಿಗೆ ಕಾಲಿಟ್ಟ ಕುಲದೀಪ್ ಸಿಂಗ್
ಆತ್ಮಹತ್ಯೆಗೂ ಮುನ್ನ ರಾಕೇಶ್ ಮಾಡಿದ್ದ ವೀಡಿಯೋದಲ್ಲಿ ತನ್ನ ಅಳಲನ್ನು ಹೇಳಿಕೊಂಡಿದ್ದಾನೆ. ನಾನು ಸ್ವಂತ ಇಚ್ಛೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಹೆಂಡತಿ ನನಗೆ ಕಿರುಕುಳ ನೀಡಿದ್ದಾಳೆ. ಜೊತೆಗೆ ಅವಳು ನನ್ನನ್ನು ಎಲ್ಲಿಯೂ ಬದುಕಲು ಬಿಡುತ್ತಿಲ್ಲ. ನನಗೆ ಏನಾದರೂ ಸಂಭವಿಸಿದರೆ ಅವಳನ್ನು ಬಂಧಿಸಿ ಎಂದಿದ್ದಾರೆ. ನಮ್ಮ ಕೌಟುಂಬಿಕ ಕಲಹದ ವಿಚಾರಣೆಯು ಟಿ.ಟಿ.ನಗರ ಠಾಣೆಯಲ್ಲಿ 4 ದಿನಗಳಿಂದ ನಡೆಯುತ್ತಿದ್ದು, ನನ್ನ ಸಾವಿಗೆ ಕಾರಣವೆಲ್ಲವೂ ಅವರಿಗೆ ತಿಳಿದಿದೆ ಎಂದು ವೀಡಿಯೋದಲ್ಲಿ ಹೇಳಿದ್ದಾನೆ. ಇದನ್ನೂ ಓದಿ: ಅಂಕಲ್ ಅಂದಿದ್ದೆ ತಪ್ಪಾಯ್ತು – ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ಅಂಗಡಿ ಮಾಲೀಕ
ರೈಲ್ವೆ ಹಳಿಯಲ್ಲಿ ರಾಕೇಶ್ ಶವ ಎರಡು ತುಂಡಾಗಿ ದೊರಕಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.