ಬೀಜಿಂಗ್: ಈಗಾಗಲೇ ಚೀನಾದ ಶಾಂಘೈನಲ್ಲಿ ಕೊರೊನಾ ಸೋಂಕು ಹೆಚ್ಚಳದಿಂದ ಲಾಕ್‍ಡೌನ್ ಆಗಿದೆ. ಈ ಮಧ್ಯೆ ವ್ಯಕ್ತಿಯೊಬ್ಬ ಶ್ವಾನವನ್ನು 3ನೇ ಮಹಡಿಯಿಂದ ಇಳಿಸಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಶ್ವಾನ ಪ್ರೇಮಿಗಳು ಇದರಿಂದ ಕೆರಳಿದ್ದಾರೆ.
ಚೀನಾದ ಅತಿದೊಡ್ಡ ನಗರ ಶಾಂಘೈ ಲಾಕ್‍ಡೌನ್ ಆಗಿದ್ದು, 16 ಮಿಲಿಯನ್ ನಿವಾಸಿಗಳು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದಾರೆ. ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಯನ್ನು 3ನೇ ಮಹಡಿಯ ಕಿಟಕಿಯಿಂದ ಕೆಳಗೆ ಇಳಿಸಿ ವಾಕ್ ಮಾಡಿಸಿದ್ದಾನೆ. ಇದನ್ನು ಪಕ್ಕದ ಮನೆಯವರು ವೀಡಿಯೋ ಮಾಡಿದ್ದು, ಇದೀಗ ಈ ವೀಡಿಯೋ ಸಾಕಷ್ಟು ವೈರಲ್ ಆಗುತ್ತದೆ. ಇದನ್ನು ನೋಡಿದ ನೆಟ್ಟಿಗರು ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
Advertisement
ವೀಡಿಯೋದಲ್ಲಿ ಏನಿದೆ?: ಕೊರೊನಾ ಹೆಚ್ಚಳದಿಂದ ಲಾಕ್‍ಡೌನ್ ಆಗಿದೆ. ಇದರಿಂದ ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಈ ಮಧ್ಯೆ ವ್ಯಕ್ತಿಯೊಬ್ಬ ತನ್ನ ಅಪಾರ್ಟ್‍ಮೆಂಟ್‍ನ 3ನೇ ಮಹಡಿ ಕಿಟಕಿಯಿಂದ ತನ್ನ ಸಾಕುನಾಯಿಯನ್ನು ಉದ್ದವಾದ ಹಗ್ಗದಿಂದ ಕೆಳಕ್ಕೆ ಇಳಿಸುತ್ತಿದ್ದಾನೆ. ನಾಯಿಯನ್ನು ನಿಧಾನವಾಗಿ ನೆಲಕ್ಕೆ ಇಳಿಸುತ್ತಾನೆ. ನಂತರ ಅದು ಅಲ್ಲಿರುವ ಪಾರ್ಕ್ ಸುತ್ತಲೂ ಆ ನಾಯಿ ಸುತ್ತುತ್ತದೆ. ಅದಾದ ಬಳಿಕ ಅದನ್ನು ಪುನಃ ಹಗ್ಗದ ಸಹಾಯದಿಂದ ಮೇಲಕ್ಕೆತ್ತುತ್ತಾನೆ.
Advertisement
LMAO. This is how you should walk your dog amid the current wave of Covid lockdown in Shanghai. #COVID19 pic.twitter.com/NFRxdCsDa3
— 57(bot,bot) ???? (@0x5_7) March 29, 2022
ವೀಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ನಾಯಿಗೆ ಕಟ್ಟಡದಿಂದ ಇಳಿಸುವಾಗ ಹಾಗೂ ಮೇಲಕ್ಕೆತ್ತುವಾಗ ಕಟ್ಟೆ ತಾಗಿ ಏನಾದರೂ ಗಾಯವಾಗವಹುದು. ಈ ರೀತಿ ಬೇಜವಾಬ್ದಾರಿಯಾಗಿ ವರ್ತಿಸಲು ಹೇಗೆ ಸಾಧ್ಯ. ನಾಯಿಯನ್ನು ನೀವೇ ಹೊರಗೆ ಕರೆದುಕೊಂಡು ಹೋಗಬೇಕಿತ್ತು ಎಂದು ಶ್ವಾನ ಪ್ರೇಮಿಗಳು ಕಿಡಿಕಾರಿದ್ದಾರೆ. ಇದನ್ನೂ ಓದಿ: ಚೀನಾದ ಶಾಂಘೈನಲ್ಲಿ ಲಾಕ್‌ಡೌನ್ ಜಾರಿ – ಭಾರತದ ಮೇಲೆ ಪರಿಣಾಮ ಏನು?
Advertisement
ವ್ಯಕ್ತಿಯು ಕೋವಿಡ್ ಪಾಸಿಟಿವ್ ಆಗಿದ್ದಾನೆ ಮತ್ತು ಅವನ ಮನೆಯೊಳಗೆ ಬೀಗ ಹಾಕಲಾಗಿದೆಯೇ ಅಥವಾ ಅವನ ಕಾಂಪೌಂಡ್ ಅನ್ನು ಅಧಿಕಾರಿಗಳು ಹೊರಗಿನಿಂದ ಲಾಕ್ ಮಾಡಿದ್ದಾರೆಯೇ ಎನ್ನುವುದರ ಕುರಿತು ಸ್ಪಷ್ಟ ಮಾಹಿತಿಯಿಲ್ಲ. ಅನೇಕ ಟ್ವಿಟ್ಟರ್ ಬಳಕೆದಾರರು ಈ ವೀಡಿಯೊವನ್ನು ಮರುಹಂಚಿಕೊಂಡಿದ್ದಾರೆ. ಇದನ್ನೂ ಓದಿ: ವುಹಾನ್ ನಂತರ ಚೀನಾದಲ್ಲಿ ಅತಿದೊಡ್ಡ ಲಾಕ್‌ಡೌನ್: 2.6 ಕೋಟಿ ಜನ ಮನೆಯಲ್ಲೇ ಲಾಕ್