ಹುಬ್ಬಳ್ಳಿ: ಸೋಶಿಯಲ್ ಮೀಡಿಯಾ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ಧಾರವಾಡದ ರಾಮನಗರ ನಿವಾಸಿ ರಾಜಶೇಖರ್ ನವಲೂರ ಅವರಿಗೆ ಲಂಡನ್‍ನಿಂದ ಉಡುಗೊರೆ ಕಳುಹಿಸಿರುವುದಾಗಿ ನಂಬಿಸಿ, ಅವರಿಂದ 4.49 ಲಕ್ಷ ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾನೆ.
Advertisement
ರಾಜಶೇಖರ್ ಅವರ ತಾಯಿಯ ಸಾಮಾಜಿಕ ಜಾಲತಾಣ ಖಾತೆಯಿಂದ ಪರಿಚಯವಾದ ವ್ಯಕ್ತಿ, ಲಂಡನ್‍ನಿಂದ ಗಿಫ್ಟ್ ಬಂದಿದೆ ಎಂದು ನಂಬಿಸಿದ್ದಾನೆ. ವಿದೇಶಿ ಹಣ ಭಾರತದ ರೂಪಾಯಿಗೆ ಬದಲಾಯಿಸಲು, ತೆರಿಗೆ ಹಾಗೂ ಇತರ ಶುಲ್ಕ ಕಟ್ಟ ಬೇಕು ಎಂದು ನಂಬಿಸಿದ್ದಾನೆ. ಈ ಹಿನ್ನೆಲೆ ಅವರಿಗೆ ರಾಜಶೇಖರ್ ಹಂತಹಂತವಾಗಿ ಬ್ಯಾಂಕ್ ಖಾತೆ, ಫೋನ್ ಪೇ ಮೂಲಕ ಹಣ ವರ್ಗಾಯಿಸಿದ್ದಾರೆ. ಹಣ ಸಂಪೂರ್ಣವಾಗಿ ಕಟ್ಟಿದ ನಂತರ ಆರೋಪಿ ರಾಜಶೇಖರ್ ಕರೆಗೆ ಸರಿಯಾಗಿ ಪ್ರತಿಕ್ರಿಯೆ ನೀಡಾದೇ ಇದ್ದಾಗ ಅವರಿಗೆ ಮೋಸ ಹೋಗಿರುವುದು ತಿಳಿದಿದೆ. ಇದನ್ನೂ ಓದಿ: ಬ್ಲೂಟೂತ್ ಬಳಸಿ ಕಾನ್‍ಸ್ಟೇಬಲ್ ಪರೀಕ್ಷೆ ಬರೆಯಲು ಯತ್ನ – ಸಿಐಡಿಗೆ ತನಿಖೆ ವಹಿಸಿದ ರಾಜ್ಯ ಗೃಹ ಇಲಾಖೆ
Advertisement
ಈ ಸಂಬಂಧ ರಾಜಶೇಖರ್ ಹುಬ್ಬಳ್ಳಿಯ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
Advertisement
Advertisement
ಇನ್ನೊಂದು ವಂಚನೆ?: ಇತ್ತೀಚೆಗೆ ಸೋಶಿಯಲ್ ಮೀಡಿಯಾ ವೇದಿಕೆಗಳು ಜನರಿಗೆ ಉಪಯೋಗವಾಗುತ್ತಿದ್ದು, ಜೊತೆಗೆ ಕೆಲವರು ಅದನ್ನು ದುರುಪಯೋಗವನ್ನು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಒಎಲ್‌ಎಕ್ಸ್ ನಲ್ಲಿ ಮಾರಾಟಕ್ಕಿಟ್ಟಿದ್ದ ಸ್ಕೂಟಿ ಖರೀದಿಸಲು ಗದಗ ರಸ್ತೆ, ಶಾಲಿನಿ ಪಾರ್ಕ್ ನಿವಾಸಿ ಕೃಷ್ಣಮಂಜರಿ ಕಲಾಲ ಅವರು ಮುಂದಾಗಿದ್ದಾರೆ. ಈ ಹಿನ್ನೆಲೆ ಸ್ಕೂಟಿ ಮಾರಾಟಕ್ಕಿಟ್ಟವರಿಗೆ ಆನ್‍ಲೈನ್‍ನಲ್ಲಿ 21 ಸಾವಿರ ರೂ. ಕಳಿಸಿದ್ದಾರೆ. ನಂತರ ಸ್ಕೂಟಿ ಖರೀದಿಸಲೆಂದು ಅಲ್ಲಿರುವ ನಂಬರ್‍ಗೆ ಸಂಪರ್ಕಿಸಿದ್ದು, ಅವರು ವಂಚಿಸಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬೆಂಗಳೂರು ವಿವಿಯಲ್ಲಿ ಹೊಸ 30 ಕೋರ್ಸ್ ಆರಂಭ
ಸ್ಕೂಟಿ ಮಾರಾಟ ಮಾಡುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಕೃಷ್ಣಮಂಜರಿ ಕಲಾಲ ಅವರು ಹುಬ್ಬಳ್ಳಿಯ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ.