ವಿಜಯಪುರ: ಇತ್ತಿಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ (Social Media) ಸದುಪಯೋಗದ ಬದಲು ದುರುಪಯೋಗವೇ ಹೆಚ್ಚಾಗುತ್ತಿದೆ. ಇನ್ನು ಕೆಲವರಂತು ಇದನ್ನೇ ಬಂಡವಾಳ ಮಾಡಿಕೊಂಡು ಹೊಸ ಹೊಸ ವಿನೂತನ ಹಣ ದೋಚಿ ಪರಾರಿಯಾಗುವ ಸುದ್ದಿಗಳು ಬಂದಿವೆ. ಇಷ್ಟಾದ್ರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಬೆಳದಿಂಗಳ ಬಾಲೆಯ ಬಲೆಗೆ ಬಿದ್ದು ಅಮಾಯಕನೋರ್ವ ಲಕ್ಷ ಲಕ್ಷ ಕಳೆದುಕೊಂಡು ಕಂಗಾಲಾದಿದ್ದಾನೆ.
Advertisement
ಮೂಲತಃ ವಿಜಯಪುರ ಜಿಲ್ಲೆಯ ಅಲಮೇಲ ತಾಲೂಕಿನ ಬಗಲೂರ ಗ್ರಾಮದ ಪರಮೇಶ್ವರ್ (Parameshwar) ಹಿಪ್ಪರಗಿ. ಇವರು ಸದ್ಯ ತೆಲಾಂಗಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿ. ತನ್ನ ಸ್ವಗ್ರಾಮದಲ್ಲಿದ್ದಾಗ ಕಳೆದ ಜೂನ್ 29 ರಂದು ಮಂಜುಳಾ ಕೆ.ಆರ್ ಎಂಬ ಫೇಸ್ ಬುಕ್ (Facebook) ಅಕೌಂಟ್‍ನಿಂದ ಫ್ರೇಂಡ್ ರಿಕ್ವೆಸ್ಟ್ ಬಂದಿದೆ. ಅದನ್ನ ಪರಮೇಶ್ವರ್ ಕನ್ ಫರ್ಮ ಮಾಡ್ತಿದಂತೆ ಆ ಕಡೆಯಿಂದ ಯುವತಿ ಮೆಸೆಂಜರ್‍ನಲ್ಲಿ ಹಾಯ್ ಅಂತಾ ಸಂದೇಶ ಕಳಿಸಿ ಪರಮೇಶ್ವರನನ್ನ ಖೆಡ್ಡಾಕ್ಕೆ ಕೆಡವಿದ್ದಾಳೆ. ನಂತರ ಪ್ರತಿ ದಿನ ಮೆಸೇಜ್ ಮಾಡುವ ಮೂಲಕ ಅಜ್ಞಾತ ಸಖಿಯೊಂದಿಗೆ ಪರಮೇಶ್ವರ್ ಸಲುಗೆ ಬೆಳಸಿಕೊಂಡಿದ್ದಾನೆ.
Advertisement
Advertisement
ಅಕ್ಟೋಬರ್ 14 ರಂದು ತಾಯಿ ಆರೋಗ್ಯ ಸರಿಯಿಲ್ಲ 700 ರೂ ಫೋನ್ ಪೇ ಮಾಡಲು ಸಂದೇಶ ಬಂದಿದೆ. ಆಗ ಪರಮೇಶ್ವರ 2000 ರೂ ಹಾಕಿದ್ದಾನೆ. ನಂತರ ಒಂದು ವಾರದ ಕಳೆದ ಮೇಲೆ ತಾಯಿ ಮೃತಳಾಗಿದ್ದಾಳೆ ಅಂತಾ 2000 ರೂ. ಕಳಿಸಲು ಸಂದೇಶ ಬಂದಿದೆ. ಆಗಲೂ ಕೂಡ ಪರಮೇಶ್ವರ್ 2000 ರೂ ಹಾಕಿದ್ದಾನೆ. ಅದೇ ರೀತಿ ಬೆಳದಿಂಗಳ ಬಾಲೆ ಕೇಳಿದಷ್ಟು, ಕೇಳಿದಾಗೆಲ್ಲ ಪರಮೇಶ್ವರ ಹಣ ಹಾಕಿದ್ದಾನೆ. ಕೆಲ ದಿನಗಳ ನಂತರ ಮಂಜುಳಾ ಕರೆ ಮಾಡಿ ಪರಮೇಶ್ವರ್‍ಗೆ ತಾನು ಐಎಎಸ್ (IAS) ಪರೀಕ್ಷೆ ಪಾಸ್ ಆಗಿದ್ದೇನೆ. ಡಿಸಿ ಪೋಸ್ಟ್ ಸಿಗುತ್ತದೆ. ಸದ್ಯ ಹಾಸನದಲ್ಲಿದ್ದೇನೆ ನನ್ನನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಬೆಂಗಳೂರಿಗೆ ಹೋಗಬೇಕಿದ್ದು, ಖರ್ಚಿಗೆ ಹಣವಿಲ್ಲ. ಹಣಕಾಸಿನ ಸಹಾಯ ಮಾಡಿದ್ರೆ ಮದುವೆ ಆಗುತ್ತೇನೆ ಅಂತಾ ಬುರುಡೆ ಬಿಟ್ಟಿದ್ದಾಳೆ. ಇದನ್ನೂ ಓದಿ: ಚಿಲುಮೆ ಅಕ್ರಮ ಪ್ರಕರಣ – ಪ್ರಮುಖ ಆರೋಪಿ ರವಿಕುಮಾರ್ ಬಂಧನ
Advertisement
ಇದನ್ನ ನಂಬಿ ದುರಾಸೆಗೆ ಬಿದ್ದ ಪರಮೇಶ್ವರ್ 50 ಸಾವಿರ ರೂ ಹಾಕಿದ್ದಾನೆ. ಮತ್ತೆ ಕೆಲ ದಿನಗಳ ನಂತರ ಮತ್ತಷ್ಟು ಸಲುಗೆಯಿಂದ, ಪ್ರೀತಿಯಿಂದ ಮಾತನಾಡಿ ಹಂತ, ಹಂತವಾಗಿ ಅಷ್ಟಿಷ್ಟಲ್ಲ ಬರೋಬ್ಬರಿ 41.26 ಲಕ್ಷ ಪೀಕಿದ್ದಾಳೆ. ನಂತರ ತನ್ನ ಕಿಸೆ ಖಾಲಿ ಆಗಿದೆ ಅಂತಾ ಪರಮೆಶ್ವರ್ ಮಂಜುಳಾಗೆ ಹೇಳಿದ್ದಾನೆ. ಆಗ ಪಾಪ ಸ್ವಲ್ಪ ಖರ್ಚಿಗೆ ಇರ್ಲಿ ಅಂತಾ ಪರಮೇಶ್ವರ್‍ಗೆ ಮಂಜುಳಾ 2.21 ಲಕ್ಷ ರೂ ಹಾಕಿದ್ದಾಳೆ. ತದನಂತರ ಮಂಜುಳಾ ಮತ್ತೆ ಹಣಕ್ಕೆ ಪರಮೇಸ್ವರ್‍ಗೆ ಬೇಡಿಕೆ ಇಟ್ಟಿದ್ದಾಳೆ. ಈ ವೇಳೆ ಬೆಳದಿಂಗಳ ಬಾಲೆಯ ಮೇಲೆ ಸಂಶಯ ಬಂದು ಪರಮೇಶ್ವರ್ ನವೆಂಬರ್ 15ರಂದು ವಿಜಯಪುರದ ಸಿಇಎನ್ ಪೋಲಿಸ್ ಠಾಣೆಯಲ್ಲಿ ಮಂಜುಳಾ ವಿರುದ್ಧ ವಂಚನೆ ಕೇಸ್ ದಾಖಲಿಸಿದ್ದಾನೆ. ಸದ್ಯ ಸಿಂದಗಿ ಪೊಲಿಸ್ ಠಾಣೆಗೆ ಕೇಸ್ ವರ್ಗಾವಣೆ ಆಗಿದ್ದು, ಮಹಾ ವಂಚಕಿ ಬೆಳದಿಂಗಳ ಬಾಲೆ ಮಂಜುಳಾಗಾಗಿ ಬಲೆ ಬೀಸಿದ್ದಾರೆ.