ಮುಂಬೈ: ವೈನ್ ಶಾಪ್ (Wine Shop) ಮಾಲೀಕರಂತೆ ನಟಿಸಿ 2 ಬಿಯರ್ (Beer) ನೀಡುವ ನೆಪದಲ್ಲಿ ವ್ಯಕ್ತಿಯೊಬ್ಬನಿಗೆ 44,782 ರೂ. ವಂಚಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.
24 ವರ್ಷದ ವ್ಯಕ್ತಿ ಗುರುಗ್ರಾಮದಿಂದ ಮುಂಬೈನ ಕೊಲಾಬಾಕ್ಕೆ ಬಂದಿದ್ದ. ಈ ವೇಳೆ ಮದ್ಯವನ್ನು ಆರ್ಡರ್ (Order) ಮಾಡಲು ಸ್ಥಳೀಯ ವೈನ್ ಶಾಪ್‍ಗಳಿಗಾಗಿ ಇಂಟರ್‌ನೆಟ್‍ನಲ್ಲಿ ಹುಡುಕಿದ್ದ. ಆಗ ಸಮೀಪದಲ್ಲೇ ಇರುವ ಅಂಗಡಿಯೊಂದರ ಮೊಬೈಲ್ ನಂಬರ್ ಸಿಕ್ಕಿತ್ತು. ಅದಾದ ಬಳಿಕ ವ್ಯಕ್ತಿ ಆ ಸಂಖ್ಯೆಗೆ ಕರೆ ಮಾಡಿದ್ದಾನೆ. ಆಗ ಓರ್ವ ಕರೆ ಸ್ವೀಕರಿಸಿ ಅದೇ ನಂಬರ್‌ನ ವಾಟ್ಸಪ್‍ಗೆ ಕರೆ ಮಾಡುವಂತೆ ತಿಳಿಸಿದ್ದಾನೆ.
Advertisement
Advertisement
ಅದೇ ರೀತಿ ಆ ವ್ಯಕ್ತಿ ವಾಟ್ಸಪ್‍ಗೆ ಕರೆ ಮಾಡಿ ಒಂದು ಬಿಯರ್ ಬಾಟಲಿಯನ್ನು ನೀಡುವಂತೆ ತಿಳಿಸಿದ್ದಾನೆ. ಆದರೆ ಅಂಗಡಿಯಾತ 2 ಬಿಯರ್ ಬಾಟಲಿಯನ್ನು ಆರ್ಡರ್ ಮಾಡಿದರೆ ಮಾತ್ರ ಆದೇಶಗಳನ್ನು ಸ್ವೀಕರಿಸುವುದಾಗಿ ತಿಳಿಸಿದ್ದಾನೆ. ಇದಕ್ಕೆ ಒಪ್ಪಿದ ವ್ಯಕ್ತಿಗೆ ಅಂಡಿಯವನು ಹಣವನ್ನು (Money) ಪಾವತಿ ಮಾಡಲು ಕ್ಯೂಆರ್ ಕೋಡ್ ಕಳುಹಿಸಿದ್ದಾನೆ. ಅಷ್ಟೇ ಅಲ್ಲದೇ ಡೆಲಿವರಿ ಶುಲ್ಕಕ್ಕಾಗಿ 30ರೂ.ವನ್ನು ಹೆಚ್ಚುವರಿಯಾಗಿ ಪಡೆದಿದ್ದಾನೆ.
Advertisement
Advertisement
ಅದಾದ ಬಳಿಕ ವ್ಯಕ್ತಿ ಅಂಗಡಿಯಾತ ಹೇಳಿದಂತೆ ಹಣ ಪಾವತಿ ಮಾಡಿದ್ದಾನೆ. ಆದರೆ ಅಂಗಡಿಯಾತ ಹಣ ಬಂದಿಲ್ಲ ಮರುಪಾವತಿ ಮಾಡುವಂತೆ ತಿಳಿಸಿದ್ದಾನೆ. ಇದೇ ರೀತಿ ಅಂಗಡಿಯಾತ 8 ಬಾರಿ ಹಣವನ್ನು ಪಡೆದುಕೊಂಡಿದ್ದಾನೆ. ಈ ವೇಳೆ ಆ ವ್ಯಕ್ತಿಗೆ 44,782 ರೂ. ಹಣ ಕಳೆದುಕೊಂಡಿದ್ದಾನೆ. ಇದನ್ನೂ ಓದಿ: ಸೇನೆಯನ್ನು ಬಲಪಡಿಸುವುದೇ ನಮ್ಮ ಉದ್ದೇಶ: ಇಮ್ರಾನ್ ಖಾನ್
ದಾದ ಬಳಿಕ ಎಚ್ಚರಗೊಂಡ ವ್ಯಕ್ತಿ ಅಂಗಡಿಯವರಿಗೆ ಕರೆ ಮಾಡಲು ಪ್ರಯತ್ನಿಸಿದ. ಆದರೆ ವ್ಯರ್ಥವಾಗಿತ್ತು. ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದು, ಅವರು ಸೈಬರ್ ಪೊಲೀಸರ ಸಹಾಯವನ್ನು ಪಡೆದಿದ್ದಾರೆ. ಇದನ್ನೂ ಓದಿ: ಫಿಲಿಪೈನ್ಸ್‌ನಲ್ಲಿ ಭೀಕರ ಪ್ರವಾಹ – 98 ಸಾವು, 62 ಜನ ನಾಪತ್ತೆ