ತಿರುವನಂತಪುರಂ: ಕೋಣೆಯೊಳಗೆ ಕೂಡಿ ಹಾಕಿದ್ದ ಪತ್ನಿಯನ್ನು ರಕ್ಷಿಸಲು ಬಂದ ಪೊಲೀಸ್ ಅಧಿಕಾರಿಯ ಮೂಗನ್ನೇ ಮುರಿದ ಪ್ರಸಂಗವೊಂದು ಕೇರಳದ ಕೊಟ್ಟಾಯಂ (Kottayam Kerala) ನಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಮೇ 14 ರಂದು ರಾತ್ರಿ 10.15ರ ಸುಮಾರಿಗೆ ಪಂಪಾಡಿಯ ವೆಲ್ಲೂರು 8ನೇ ಮೈಲಿನಲ್ಲಿ ಈ ಘಟನೆ ನಡೆದಿದೆ. ಜಿಬಿನ್ ಲೋಬೋ (Jibin Lobo) ಹಲ್ಲೆಗೊಳಗಾದ ಪೊಲೀಸ್ ಅಧಿಕಾರಿ. ಇವರು ಪಾಪಂಡಿ ಪೊಲೀಸ್ ಠಾಣೆಯ ಸೀನಿಯರ್ ಆಫೀಸರ್ ಆಗಿದ್ದಾರೆ. ಸ್ಯಾಮ್ ಝಕರಿಯಾ ( Sam Zakariya) (42) ಹಲ್ಲೆ ಮಾಡಿದ ವ್ಯಕ್ತಿಯಾಗಿದ್ದು, ಈತ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದನು. ಹಲ್ಲೆಯಿಂದಾಗಿ ಅಧಿಕಾರಿಯ ಮೂಗು ಮುರಿದು ಹೋಗಿದೆ. ಅಲ್ಲದೆ ಕಣ್ಣಿಗೂ ಗಾಯಗಳಾಗಿವೆ.
Advertisement
Advertisement
ನಡೆದಿದ್ದೇನು..?: ಆರೋಪಿ ಸ್ಯಾಮ್ ಅವರ ಪತ್ನಿ ಬಿನಿ, ಪಂಪಾಡಿ ಪೊಲೀಸ್ ಠಾಣೆಗೆ ಕರೆ ಮಾಡಿ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನನ್ನನ್ನು ರೂಮಿನಲ್ಲಿ ಕೂಡಿ ಹಾಕಿ ಬೀಗ ಹಾಕಲಾಗಿದೆ ಎಂದು ದೂರು ನೀಡಿದ್ದರು. ಕೂಡಲೇ ಗ್ರೇಡ್ ಎಸ್‍ಐ ರಾಜೇಶ್, ಎಸ್‍ಸಿಪಿಒ ಜಿಬಿನ್ ಮತ್ತು ಹೋಂಗಾರ್ಡ್ ಜಯಕುಮಾರ್ ಸ್ಥಳಕ್ಕೆ ದೌಡಾಯಿಸಿದರು. ಇದನ್ನೂ ಓದಿ: ಹಾಡಹಗಲೇ ಡ್ರ್ಯಾಗರ್ ಹಿಡಿದು ಯುವತಿಗೆ ಕಿರುಕುಳ ನೀಡಿದ ದುಷ್ಕರ್ಮಿ – ಮತ್ತೊಬ್ಬ ಮಹಿಳೆಯಿಂದ ರಕ್ಷಣೆ
Advertisement
ಅಲ್ಲದೆ ಮಹಿಳೆಯನ್ನು ಕೂಡಿ ಹಾಕಿದ್ದ ಕೊಠಡಿಯ ಬಾಗಿಲು ತೆರೆಯಲು ಪೊಲೀಸ್ ಅಧಿಕಾರಿ ಯತ್ನಿಸುತ್ತಿದ್ದಾಗ ಸ್ಯಾಮ್, ಜಿಬಿನ್ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಆರೋಪಿ, ರಾಜೇಶ್ ಮತ್ತು ಜಯಕುಮಾರ್ ಅವರನ್ನು ತಳ್ಳಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮಂತುರುತಿಯ ಚಂಪಕ್ಕರ ಮೂಲದ ಪೊಲೀಸ್ ಅಧಿಕಾರಿ ಜಿಬಿನ್ ಅವರ ಕಣ್ಣಿನ ರೆಪ್ಪೆಯ ಮೇಲೆ ಗಾಯವಾಗಿದ್ದು, ನಾಲ್ಕು ಹೊಲಿಗೆಗಳನ್ನು ಹಾಕಲಾಗಿದೆ.
Advertisement
ಬಿನಿ ತನ್ನ ಮೊದಲ ಪತಿಯಿಂದ ವಿಚ್ಛೇದನ ಪಡೆದ ನಂತರ ಎರಡು ವರ್ಷಗಳ ಹಿಂದೆ ಸ್ಯಾಮ್‍ನನ್ನು ವಿವಾಹವಾದಳು. ಆಕೆಗೆ ಮೊದಲ ಪತಿಯಿಂದ ಮೂವರು ಮಕ್ಕಳಿದ್ದಾರೆ. ಆದರೆ ಮಕ್ಕಳನ್ನು ಮನೆಗೆ ಕರೆತರುವುದಿಲ್ಲ ಎಂಬ ಷರತ್ತಿನ ಮೇಲೆ ಬಿನಿಯನ್ನು ಸ್ಯಾಮ್ ಮದುವೆಯಾಗಿದ್ದನು.