ರಾಯ್ಪುರ್: ರಾತ್ರಿ ಊಟ (Dinner) ನೀಡಲು ನಿರಾಕರಿಸಿದ ಪತ್ನಿಯನ್ನು (Wife) ಕೊಡಲಿಯಿಂದ ಕೊಂದ ಘಟನೆ ಛತ್ತಿಸ್‍ಗಢದಲ್ಲಿ (Chhattisgarh) ನಡೆದಿದೆ.
ಮಂಜೀತಾ ಶ್ರೀವಾಸ್ (32) ಮೃತ ಮಹಿಳೆ. ಈಕೆಯ ಪತಿ ಯೋಗೇಂದ್ರ ಶ್ರೀನಿವಾಸ್ (38) ಕೊರ್ಬಾದ ಖಾಸಗಿ ಕ್ಲಿನಿಕ್‍ನಲ್ಲಿ ಕಾಂಪೌಂಡರ್ ಆಗಿ ಕೆಲಸ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಯೋಗೇಂದ್ರ ರಾತ್ರಿ ಕೆಲಸ ಮುಗಿಸಿ ಹಿಂತಿರುಗಿ ಪುಸ್ತಕ ಓದುತ್ತಿದ್ದಾಗ ಪತ್ನಿಗೆ ಊಟ ಬಡಿಸುವಂತೆ ಕೇಳಿದ್ದ. ಆದರೆ ಮಂಜೀತಾ ಊಟ ನೀಡಲು ನಿರಾಕರಿಸಿದ್ದಾಳೆ.
ಇದೇ ಕಾರಣಕ್ಕೆ ಯೋಗೇಂದ್ರ ಹಾಗೂ ಮಂಜೀತಾ ನಡುವೆ ಜಗಳವಾಗಿದೆ. ಈ ವೇಳೆ ಕೋಪದ ಭರದಲ್ಲಿ ಯೋಗೇಂದ್ರ ಪತ್ನಿ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಮಂಜೀತಾ ಜೋರಾಗಿ ಕಿರುಚಿದ್ದಾಳೆ. ತಾಯಿಯ ಕಿರುಚಾಟ ಕೇಳಿದ ಯೋಗೇಂದ್ರ ಹಾಗೂ ಮಂಜಿತಾ ಮಕ್ಕಳು ಸ್ಥಳಕ್ಕೆ ಓಡಿ ಹೋಗಿದ್ದಾರೆ. ಈ ವೇಳೆ ರಕ್ತದ ಮಡುವಿನಲ್ಲಿ ಬಿದ್ದಿರುವ ತಾಯಿಯನ್ನು ನೋಡಿದ್ದಾರೆ. ಇದನ್ನೂ ಓದಿ: ವಿವಾಹಿತೆಯೊಂದಿಗೆ ಪ್ರೇಮ- ಹೋಟೆಲ್‌ನಲ್ಲಿ ರಾತ್ರಿ ತನ್ನೊಂದಿಗೆ ಇರಲು ನಿರಾಕರಿಸಿದ್ದಕ್ಕೆ ಕೊಲೆ
ಕೂಡಲೇ ತಾಯಿ ಕೊಲೆಯಾದ ಬಗ್ಗೆ ಮಕ್ಕಳು ಅಕ್ಕಪಕ್ಕದ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಅದಾದ ಬಳಿಕ ಘಟನೆಗೆ ಸಂಬಂಧಿಸಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಘಟನೆಗೆ ಸಂಬಂಧಿಸಿ ಆರೋಪಿ ಯೋಗೇಂದ್ರನನ್ನು ಬಂಧಿಸಿದ್ದಾರೆ. ದಂಪತಿ ಆಗಾಗ್ಗೆ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಡುತ್ತಿದ್ದರು. ಆರೋಪಿಯು ತನ್ನ ಹೆಂಡತಿಯ ವಾದದ ಸ್ವಭಾವದಿಂದ ತೀವ್ರ ಸಮಸ್ಯೆ ಹೊಂದಿದ್ದನು ಪೊಲೀಸ್ ಮೂಲಗಳು ತಿಳಿಸಿದೆ. ಇದನ್ನೂ ಓದಿ: ಶೀಘ್ರವೇ 2ನೇ ಬೂಸ್ಟರ್ ಡೋಸ್? – ಕೇಂದ್ರ ಆರೋಗ್ಯ ಸಚಿವರಿಗೆ ವೈದ್ಯಾಧಿಕಾರಿಗಳ ಡಿಮಾಂಡ್