ಮುಂಬೈ: ಆಟೋರಿಕ್ಷಾದ ಚಕ್ರದಿಂದ ಮೈಗೆ ಕೆಸರು ಚಿಮ್ಮಿದ್ದಕ್ಕೆ ಅದೇ ಮಾರ್ಗದಲ್ಲಿ ಆಟೋ ಮರಳಿ ಬರುವ ತನಕ ಕಾದು ಕುಳಿತು ಚಾಲಕನಿಗೆ ವ್ಯಕ್ತಿಯೊಬ್ಬ ಚಾಕು ಇರಿದ ಪ್ರಕರಣ ಮಹಾರಾಷ್ಟ್ರದ ಥಾಣೆಯಲ್ಲಿ (Thane) ನಡೆದಿದೆ.
ಚಾಕು ಇರಿದ ಆರೋಪಿಯನ್ನು ಶಹಬಾಜ್ ಖಾನ್ ಎಂದು ಗುರುತಿಸಲಾಗಿದೆ. ಶಹಬಾಜ್ ಘೋಡ್‍ಬಂದರ್ ರಸ್ತೆಯಲ್ಲಿ ಬೈಕ್‍ನಲ್ಲಿ ಹೋಗುತ್ತಿದ್ದಾಗ ಆಟೋರಿಕ್ಷಾವೊಂದು ಪಕ್ಕದಲ್ಲಿ ಹಾದು ಹೋಗಿತ್ತು. ಈ ವೇಳೆ ಚಕ್ರ ಗುಂಡಿಗೆ ಇಳಿದ ಪರಿಣಾಮ ಶಹಬಾಜ್ ಮೈಗೆ ಹೆಸರು ಹಾರಿತ್ತು. ಇದೇ ಕಾರಣಕ್ಕೆ ಆತ ಒಂದು ಗಂಟೆಗಳ ಕಾಲ ಕಾದು ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಚಾಕು ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬರ್ಗರ್ ಕಿಂಗ್ ರೆಸ್ಟೋರೆಂಟ್ ಶೂಟೌಟ್ ಕೇಸ್ – ಮೂವರು ಗ್ಯಾಂಗ್‍ಸ್ಟರ್‌ಗಳ ಎನ್‍ಕೌಂಟರ್
ಆಟೋ ಚಾಲಕನ ದೂರಿನ ಆಧಾರದ ಮೇಲೆ ಪೊಲೀಸರು ಖಾನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (Bharatiya Nyaya Sanhita) ಸೆಕ್ಷನ್ 118-1 (ಹಲ್ಲೆ, ಗಾಯವನ್ನುಂಟುಮಾಡುವುದು) 352 (ಉದ್ದೇಶಪೂರ್ವಕ ಅವಮಾನ) ಮತ್ತು 351-2 (ಅಪರಾಧಿಕ ಭಯೋತ್ಪಾದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮ ಬಹುಕೋಟಿ ಹಗರಣ ಕೇಸ್ – ಮಾಜಿ ಸಚಿವ ನಾಗೇಂದ್ರ ಬಂಧನ!