Connect with us

ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೇಯಸಿ, ಆಕೆಯ ಸಹೋದರಿಯನ್ನೂ ಕೊಂದ ಎಂಜಿನಿಯರ್!

ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೇಯಸಿ, ಆಕೆಯ ಸಹೋದರಿಯನ್ನೂ ಕೊಂದ ಎಂಜಿನಿಯರ್!

ಲಕ್ನೌ: ಪ್ರೀತಿಯನ್ನು ನಿರಾಕರಿಸಿದಕ್ಕೆ ಎಂಜಿನಿಯರ್ ಒಬ್ಬ ತನ್ನ ಪ್ರೇಯಸಿಯನ್ನು ಕೊಂದು ನಂತರ ಆಕೆಯ ಸಹೋದರಿಯನ್ನು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್‍ನಲ್ಲಿ ನಡೆದಿದೆ.

ಅಂಕಿತ್ ಕೊಲೆ ಮಾಡಿದ ಆರೋಪಿಯಾಗಿದ್ದು, ಶೀಲು ಮತ್ತು ಶಿವಾನಿ ಮೃತ ದುರ್ದೈವಿಗಳು. ಅಂಕಿತ್ ದಾಕೋಲಿ ಗ್ರಾಮದವನಾಗಿದ್ದು, ಪಕ್ಕದ ಗ್ರಾಮದ ಬಾಪುರ್ ನ ಶೀಲುನನ್ನು ಬೆಂಕಿ ಹಾಕಿ ಸುಟ್ಟಿದ್ದಾನೆ. ಅದನ್ನು ನೋಡಿದ ಆಕೆಯ ಸಹೋದರಿಯನ್ನು ಕೂಡ ಬೆಂಕಿ ಹಚ್ಚಿ ಸುಟ್ಟಿದ್ದಾನೆ.

ಅಂಕಿತ್ ಶೀಲು ಮನೆಗೆ ತೆರಳಿ ನನ್ನನ್ನು ಮದುವೆಯಾಗುವಂತೆ ಕೇಳಿ ಕೊಂಡಿದ್ದಾನೆ. ಆದರೆ ಶೀಲು ಆತನ ಪ್ರೀತಿಯನ್ನು ನಿರಾಕರಿಸಿದ್ದಾರೆ. ಪ್ರೀತಿ ನಿರಾಕರಿಸಿದ್ದಕ್ಕೆ ಅಂಕಿತ್ ಆಕೆಯನ್ನು ಕೊಲೆ ಮಾಡಿದ್ದಾನೆ. ಶೀಲು ಕೊಲೆಯನ್ನು ಪ್ರತ್ಯಕ್ಷವಾಗಿ ನೋಡಿದ ಶಿವಾನಿಯನ್ನು ಕೂಡ ಬೈಕಿನ ಕ್ಲಚ್ ವೈರ್‍ನಿಂದ ಕೊಲೆ ಮಾಡಿದ್ದಾನೆ. ನಂತರ ತನ್ನ ಬೈಕಿನಲ್ಲಿದ್ದ ಪೆಟ್ರೋಲ್ ಹೊರತೆಗೆದು ಅವರ ದೇಹವನ್ನು ಸುಟ್ಟು ಹಾಕಿದ್ದಾನೆ ಎಂದು ಎಸ್‍ಎಸ್‍ಪಿ ಮುನಿರಾಜ್. ಜಿ ಹೇಳಿದ್ದಾರೆ.

ಘಟನೆ ನಡೆದ 24 ಗಂಟೆಯೊಳಗೆ ಆರೋಪಿ ಅಂಕಿತ್ ನನ್ನು ಪೊಲೀಸರು ಸೆರೆ ಹಿಡಿದಿದ್ದು, ಆತನ ಮೊಬೈಲ್ ವಶ ಪಡಿಸಿಕೊಂಡಿದ್ದಾರೆ. ಈ ಘಟನೆ ಸಂಬಂಧ ಪೊಲೀಸರಿಗೆ ಇನ್ನೂ ಕೆಲವರ ಮೇಲೆ ಅನುಮಾನವಿದ್ದು, ಅವರ ಮೇಲೂ ಕಣ್ಣಿಟ್ಟಿದ್ದಾರೆ. ಕೊಲೆ ನಡೆದ ದಿನ ಶೀಲು ಮನೆಯಲ್ಲೇ ಇದ್ದೆ ಹಾಗೂ ಆಕೆಯ ಸಹೋದರಿಯನ್ನು ನಾನೇ ಕೊಂದೇ ಎಂದು ಅಂಕಿತ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

Advertisement
Advertisement