ಮುಂಬೈ: ಬೆಳಗ್ಗೆ ನೀಡಿದ್ದ ಟಿಫನ್‍ನಲ್ಲಿ ಉಪ್ಪು, ಖಾರ ಅಧಿಕವಾಗಿದೆ ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ತನ್ನ 40 ವರ್ಷದ ಪತ್ನಿಯ ಕತ್ತು ಹಿಸುಕಿ ಕೊಂದಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.
Advertisement
ಶುಕ್ರವಾರ ಬೆಳಗ್ಗೆ ಭಾಯಂದರ್ ಪೂರ್ವದ ಫಟಕ್ ರಸ್ತೆ ಪ್ರದೇಶದಲ್ಲಿ ಈ ಘಟನೆ ಜರುಗಿದ್ದು, ಮೃತ ದುರ್ದೈವಿಯನ್ನು ನಿರ್ಮಲಾ ಎಂದು ಗುರುತಿಸಲಾಗಿದೆ. 46 ವರ್ಷದ ಆರೋಪಿ ನಿಲೇಶ್ ಘಾಘ್ ಪತ್ನಿ ಕಿಚಡಿ ಮಾಡಿ ಬೆಳಗಿನ ಉಪಹಾರವಾಗಿ ನೀಡಿದ್ದರು. ಕಿಚಡಿಯಲ್ಲಿ ಹೆಚ್ಚು ಉಪ್ಪು ಇದ್ದಿದ್ದರಿಂದ ಕೋಪಗೊಂಡ ನಿಲೇಶ್ ಘಾಘ್ ಉದ್ದನೆಯ ಬಟ್ಟೆಯಿಂದ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಘಟನೆ ಸಂಬಂಧ ಮಾಹಿತಿ ದೊರೆತ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಪೊಲೀಸ್ ಕಮಿಷನರೇಟ್‍ನ ಅಧಿಕಾರಿ ಮೀರಾ ಭಯಂದರ್-ವಸಾಯಿ ವಿರಾರ್ ತಿಳಿಸಿದ್ದಾರೆ. ಇದನ್ನೂ ಓದಿ: 4ರ ಬಾಲಕಿ ಮೇಲೆ 9 ವರ್ಷದ ಬಾಲಕನಿಂದ ಲೈಂಗಿಕ ದೌರ್ಜನ್ಯ
Advertisement
Advertisement
ಘಟನೆಗೆ ಬೇರೆ ಏನಾದರೂ ಕಾರಣವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸದ್ಯ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಭಯಂದರ್‌ನ ನವಘರ್ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಮಕ್ಕಾ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿ ಪೋಸ್ಟ್ – ಹುಬ್ಬಳ್ಳಿಯಲ್ಲಿ ಮುಸ್ಲಿಂ ಪುಂಡರಿಂದ ದಾಂಧಲೆ
Advertisement
ಗುರುವಾರ ಕೂಡ ಇದೇ ರೀತಿ ಮಹಿಳೆಯೊಬ್ಬಳು ಚಹಾದ ಜೊತೆಗೆ ಟಿಫನ್ ನೀಡಲಿಲ್ಲ ಎಂಬ ಕಾರಣಕ್ಕೆ ಆಕೆಯ ಮಾವ ಮಹಿಳೆ ಮೇಲೆ ಪಿಸ್ತೂಲ್‍ನಿಂದ ಗುಂಡು ಹಾರಿಸಿ ಹತ್ಯೆಗೈದಿದ್ದನು. ರಾಬೋಡಿ ಪ್ರದೇಶದ ನಿವಾಸಿಯಾಗಿದ್ದ 42 ವರ್ಷದ ಮಹಿಳೆಯ ಹೊಟ್ಟೆಗೆ ಗುಂಡು ತಗುಲಿ ಶುಕ್ರವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.