CrimeLatestMain PostNational

ನೀರಿದ್ದ ಬಕೆಟ್‌ಗೆ ತಲೆ ಮುಳುಗಿಸಿ ಪತ್ನಿಯನ್ನ ಕೊಂದ, ತಾನೂ ಆತ್ಮಹತ್ಯೆ ಮಾಡ್ಕೊಂಡ

Advertisements

ಹೈದರಾಬಾದ್: ನೀರು ತುಂಬಿದ ಬಕೆಟ್ ಒಳಗೆ ಪತ್ನಿಯ ತಲೆ ಮುಳುಗಿಸಿ ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ತಾನೂ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಮೃತರನ್ನು ಮಹಾನಂದ ಬಿಸ್ವಾಸ್ (24), ಪಂಪಾ ಸರ್ಕಾ (22) ಎಂದು ಗುರುತಿಸಲಾಗಿದೆ. ಮೂಲತಃ ಈತ ಅಸ್ಸಾಂ ನಿವಾಸಿ, ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿರುವ ಶಾಪಿಂಗ್ ಮಾಲ್ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಈತನ ಮೃತದೇಹ ಮಂಗಳವಾರ ಲಕಡಿ ಕಾ ಪುಲ್ ರೈಲು ನಿಲ್ದಾಣದ ಹಳಿಗಳ ಮೇಲೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಏಕನಾಥ್‌ ಶಿಂಧೆ ಸಿಎಂ – ನಾನು ಸರ್ಕಾರದಲ್ಲಿ ಇರಲ್ಲ ಎಂದ ಫಡ್ನವೀಸ್‌

ಸಾಂದರ್ಭಿಕ ಚಿತ್ರ

ಪಂಪಾ ಸರ್ಕಾ ಮತ್ತು ಬಿಸ್ವಾತ್ ಇಬ್ಬರೂ ಅಸ್ಸಾಂ ಮೂಲದವರು. ಕೆಲಸಕ್ಕೆಂದು ಹೈದರಾಬಾದ್‌ಗೆ ಬಂದಿದ್ದರು. ಒಂದೂವರೆ ವರ್ಷದ ಹಿಂದೆ ಮದುವೆಯಾಗಿ ಪ್ರೇಮ್‌ನಗರದಲ್ಲಿ ವಾಸವಿದ್ದರು. ಪತ್ನಿಯ ಶೀಲ ಶಂಕಿಸಿ, ಕೆಲವು ದಿನಗಳ ಹಿಂದೆ ಬಿಸ್ವಾಸ್ ಆಕೆಯನ್ನು ಪ್ರಶ್ನಿಸಿದ್ದರು. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ತಾರಕ್ಕೇರಿ ಮಾತಿನ ಚಕಮಕಿ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಇದನ್ನೂ ಓದಿ: ಮೋದಿ, ಅಮಿತ್‌ ಶಾ, ಯೋಗಿಗೆ ಜೀವ ಬೆದರಿಕೆ – ಆರೋಪಿಯನ್ನು ಬಂಧಿಸಿ ಬಿಟ್ಟು ಕಳುಹಿಸಿದ ಪೊಲೀಸರು

CRIME

ಪತ್ನಿ ಮೃತಪಟ್ಟಿರುವುದು ದೃಢವಾದ ಬಳಿಕ ಮೃತದೇಹವನ್ನು ಅಲ್ಲಿಯೇ ಬಿಟ್ಟು, ಮನೆಯನ್ನು ಲಾಕ್ ಮಾಡಿ, ಮರು ದಿನ ಬಿಸ್ವಾತ್ ರೈಲು ನಿಲ್ದಾಣಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಿಸ್ವಾಸ್ ಮೃತದೇಹ ಪತ್ತೆಯಾದಾಗ ಆತನ ಪಾಕೆಟ್‌ನಲ್ಲಿ ಒಂದು ಪೋನ್ ಮತ್ತು ಡೈರಿ ಇತ್ತು. ಅಸ್ಸಾಮೀಸ್ ಭಾಷೆಯಲ್ಲಿ ಬರೆದಿದ್ದರಿಂದ ಅದರ ಅನುವಾದಕ್ಕಾಗಿ ಪೊಲೀಸರು ಬಿಸ್ವಾಸ್ ಸ್ನೇಹಿತರನ್ನು ಸಂಪರ್ಕಿಸಿದರು. ಬಿಸ್ವಾಸ್ ಸ್ನೇಹಿತರು ಹೇಳುವಂತೆ ಪತ್ನಿಯನ್ನು ಕೊಲೆ ಮಾಡಿ ಅದೇ ನೋವಿನಿಂದ ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆತ ಹೇಳಿದ್ದಾನೆ ಎನ್ನಲಾಗಿದೆ.

ಡೈರಿ ಓದಿದ ಬಳಿಕ ಪೊಲೀಸರು ಬಿಸ್ವಾತ್ ಮನೆಗೆ ದೌಡಾಯಿಸಿದ್ದಾರೆ. ಆದರೆ ಬಾಗಿಲನ್ನು ಲಾಕ್ ಮಾಡಲಾಗಿತ್ತು. ಬೀಗವನ್ನು ಮುರಿದು ಮನೆಯ ಒಳಹೊಕಾಗಿ ನಿಗೂಡ ಸ್ಥಿತಿಯಲ್ಲಿ ಬಿಸ್ವಾಸ್ ಪತ್ನಿ ಪಂಪಾ ಸರ್ಕಾ (22)ರ ಮೃತದೇಹ ಪತ್ತೆಯಾಯಿತು. ಪೊಲೀಸರ ಪ್ರಕಾರ ಪಂಪಾಳ ತಲೆಯನ್ನು ನೀರು ತುಂಬಿದ ಬಕೆಟ್‌ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.

ಸದ್ಯ ಪೊಲೀಸರು ಮೃಹದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Live Tv

Leave a Reply

Your email address will not be published.

Back to top button