ಭೋಪಾಲ್: ತನ್ನ ಮದುವೆಯನ್ನು ತಡೆಯುತ್ತಿದ್ದಾಳೆ ಇವಳು ಮಾಟಗಾತಿಯೆಂದು (Witch) ಆರೋಪಿಸಿ ಮಗನೇ ತನ್ನ ತಾಯಿಯನ್ನು (Mother) ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದ ಭೋಪಾಲ್‍ನಲ್ಲಿ ನಡೆದಿದೆ.
ಅಬ್ದುಲ್ ಅಹ್ಮದ್ ಫರ್ಹಾನ್ (32) ತನ್ನ ತಾಯಿ ಅಸ್ಮಾ ಫಾರೂಖ್‌ಳನ್ನು(67) ಕ್ರಿಕೆಟ್ ಬ್ಯಾಟ್ ಹಾಗೂ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಂದಿದ್ದಾನೆ. ತನ್ನ ತಾಯಿ, ತನಗೆ ಮದುವೆ (Marriage) ಮಾಡಲು ಆಸಕ್ತಿ ಹೊಂದಿರಲಿಲ್ಲ ಎಂದು ಫರ್ಹಾನ್ ಭಾವಿಸಿದ್ದ. ಈ ಹಿನ್ನೆಲೆಯಲ್ಲಿ ಫರ್ಹಾನ್ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ತನ್ನ ತಾಯಿ ಫಾರೂಖ್ ಜೊತೆ ಜಗಳವಾಡಿದ್ದಾನೆ.
ಈ ವೇಳೆ ಫಾರೂಖ್ ನೀನು ಮೊದಲು ಕೆಲಸ ಹುಡುಕು, ಆ ನಂತರದಲ್ಲಿ ನಿನ್ನ ಮದುವೆ ಮಾಡುತ್ತೇನೆ ಎಂದು ತಿಳಿಸಿದ್ದಾಳೆ. ಆದರೆ ಸಿಟ್ಟಿನಲ್ಲಿದ್ದ ಫರ್ಹಾನ್ ತಾಯಿಗೆ ನೀನು ಮಾಟಗಾರ್ತಿ ಎಂದು ಹೇಳಿ ಹತ್ಯೆ ಮಾಡಿದ್ದಾನೆ. ಅದಾದ ಬಳಿಕ ತನ್ನ ಸಹೋದರ ಹಾಗೂ ಅತ್ತಿಗೆ ಮನೆಗೆ ಹಿಂದುರುಗಿದಾಗ ತಾಯಿ ಟೆರೆಸ್ಸಿನಿಂದ ಬಿದ್ದಿದ್ದಾರೆ ಎಂದು ಹೇಳಿದ್ದಾನೆ. ಘಟನೆಗೆ ಸಂಬಂಧಿಸಿ ಸಬ್ ಇನ್ಸ್‌ಪೆಕ್ಟರ್‌ಗೆ ಫರ್ಹಾನ್‍ನ ಸಹೋದರ ಮಾಹಿತಿ ನೀಡಿದ್ದಾನೆ. ಇದನ್ನೂ ಓದಿ: ಮುರುಘಾಶ್ರೀ ಮಾತ್ರವಲ್ಲ ಕೆಳ ಹಂತದವರಿಂದ್ಲೂ ವಿದ್ಯಾರ್ಥಿನಿಯರ ಬಳಕೆ: ಪರಶು
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಅನುಮಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಫರ್ಹಾನ್‍ನನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೊಲೆ ಮಾಡಿರುವುದಾಗಿ ಫರ್ಹಾನ್ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ವಿರೋಧದ ನಡುವೆಯೂ ಅಧಿಕೃತ ಅನುಮತಿಯೊಂದಿಗೆ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ