ಜೈಪುರ: 25 ವರ್ಷದ ಪುತ್ರ (Son) ನೊಬ್ಬ ತನ್ನ ತಾಯಿಯನ್ನೇ ಸುಮಾರು 80ಕ್ಕೂ ಹೆಚ್ಚು ಬಾರಿ ಚೂರಿಯಿಂದ ಇರಿದು ಕೊಂದ ವಿಲಕ್ಷಣ ಘಟನೆಯೊಂದು ರಾಜಸ್ಥಾನ (Rajasthan) ದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಮಂಜು (46) ಎಂದು ಗುರುತಿಸಲಾಗಿದೆ. ಈ ಘಟನೆ ರಾಜಸ್ಥಾನದ ಬಿಲ್ವಾರಾ ಪುರ್ ಟೌನ್‍ನಲ್ಲಿರುವ ಶಂಕರ್ ಲಾಲ್ ಮನೆಯಲ್ಲಿ ನಡೆದಿದೆ. ಇದನ್ನೂ ಓದಿ: ಕಟ್ಟಡದ 7ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ
ಏನಿದು ಘಟನೆ?: ಪತಿ ಲಾಲ್ ಮಾರುಕಟ್ಟೆಗೆ ತೆರಳಿದ್ದರು. ಇತ್ತ ಮಂಜು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲೆಮದು ಅಣ್ಣನ ಮನೆಗೆ ತೆರಳಲು ಬಟ್ಟೆ ಪ್ಯಾಕ್ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಪುತ್ರ ಸುನೀಲ್, ಮದುವೆಗೆ ಹೋಗುವುದು ಬೇಡ ಎಂದು ಅಮ್ಮನ ಜೊತೆ ಕ್ಯಾತೆ ತೆಗೆದಿದ್ದಾನೆ. ಪರಿಣಾಮ ಅಮ್ಮ-ಮಗನ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ಜಗಳ ತಾರಕಕ್ಕೇರಿದ್ದರಿಂದ ಸಿಟ್ಟಿಗೆದ್ದ ಪುತ್ರ ಅಡುಗೆ ಮನೆಯಲ್ಲಿದ್ದ ಚಾಕು ತಂದು ಅಮ್ಮನಿಗೆ ಸುಮಾರು 80ಕ್ಕೂ ಹೆಚ್ಚು ಬಾರಿ ಇರಿದು ಕೊಂದಿದ್ದಾನೆ.
ಇತ್ತ ಅಮ್ಮ ಸತ್ತೋಗಿರುವುದು ಗಮನಕ್ಕೆ ಬರುತ್ತಿದ್ದಂತೆಯೇ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ನಂತರ ಪೊಲೀಸರು ಆರೋಪಿಯನ್ನು ಹುಡುಕಿ ಜೈಲಿಗಟ್ಟಿದ್ದಾರೆ. ಕಂಪ್ಯೂಟರ್ ಕೋರ್ಸ್ ಮುಗಿಸಿರುವ ಆರೋಪಿ ನಿರುದ್ಯೋಗಿಯಾಗಿದ್ದನು ಎಂದು ತಂದೆ ಲಾಲ್ ತಿಳಿಸಿದ್ದಾರೆ. ಇನ್ನೋರ್ವ ಪುತ್ರ ವಿನೋದ್ ನೀಡಿದ ದೂರಿನಂತೆ ಪೊಲೀಸರು ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.