ಮುಂಬೈ: ವ್ಯಕ್ತಿಯೊಬ್ಬ ತನ್ನ 3 ವರ್ಷದ ಮಗಳ ಮುಂದೆಯೇ ಪತ್ನಿಯನ್ನು ಕೊಲೆ ಮಾಡಿ ನೇಣಿಗೆ ಶರಣಾದ ಘಟನೆ ಗುರುವಾರ ಮಹಾರಾಷ್ಟ್ರದ ಥಾಣೆಯ ವಾಗ್ಲೇ ಎಸ್ಟೇಟ್ ಏರಿಯಾದಲ್ಲಿ ನಡೆದಿದೆ.
ಸುನಿಲ್ ಸಾಂಗ್ಲೇ(40) ಪತ್ನಿಯನ್ನು ಕೊಲೆ ಮಾಡಿ ಆತ್ನಹತ್ಯೆಗೆ ಶರಣಾದ ವ್ಯಕ್ತಿ. ಸುನೀಲ್ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಮೊದಲು ಸುನಿಲ್ ತನ್ನ ಪತ್ನಿ ಅರ್ಚನಾಳನ್ನು ಕೊಲೆ ಮಾಡಿದ್ದಾನೆ. ಬಳಿಕ ತನ್ನ ಮಗಳಿಗೆ ಐಸ್‍ಕ್ರೀಂ ಕೊಡಿಸಲು ಹೊರಗೆ ಹೋಗಿದ್ದನು. ಮನೆಗೆ ಬಂದ ನಂತರ ತನ್ನ 3 ವರ್ಷದ ಮಗಳ ಮುಂದೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
Advertisement
Advertisement
ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾನೆ ಎಂದು ನಮಗೆ ಕರೆ ಬಂತು. ಆಗ ನಾವು ಸುನಿಲ್ ಮನೆಗೆ ಹೋಗಿದ್ದೇವೆ. ಅಲ್ಲಿಗೆ ಹೋದ ಬಳಿಕ ಸುನೀಲ್ ತನ್ನ ಮಗಳ ಮುಂದೆಯೇ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂಬ ವಿಷಯ ತಿಳಿಯಿತು. ಸುನಿಲ್ ಮೊದಲು ತನ್ನ ಪತ್ನಿ ಅರ್ಚನಾ ಕಪಾಳಕ್ಕೆ ಎರಡೇಟು ಹೊಡೆದಿದ್ದಾನೆ. ಬಳಿಕ ಆಕೆ ನಿದ್ರೆಯಲ್ಲಿದ್ದಾಗ ದಿಂಬಿನಿಂದ ಆಕೆಯ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ವಾಗ್ಲೇ ಎಸ್ಟೇಟ್ ಎಸಿಪಿ ಪ್ರಕಾಶ್ ನಿಲೇವಾಡ್ ತಿಳಿಸಿದ್ದಾರೆ.
Advertisement
Advertisement
ನನ್ನ ತಂದೆ ಕೊಲೆ ಮಾಡಿದ ಬಳಿಕ ಇಬ್ಬರ ಸಂಬಂಧಿಕರಿಗೆ ಕರೆ ಮಾಡಿ, “ನಾನು ನನ್ನ ಪತ್ನಿಯನ್ನು ದೇವರ ಮನೆಗೆ ಕಳುಹಿಸಿದ್ದೇನೆ” ಎಂದು ಹೇಳುತ್ತಿದ್ದರು ಎಂದು ಮೂರು ವರ್ಷದ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಸುನೀಲ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಡೆತ್‍ನೋಟ್ ಬರೆದು ಅದನ್ನು ಮನೆಯ ಗೋಡೆಯ ಮೇಲೆ ಅಂಟಿಸಿದ್ದನು.
ಡೆಟ್‍ನೋಟ್‍ನಲ್ಲಿ ಏನಿದೆ?
ತನ್ನ ಪತ್ನಿಯನ್ನು ಕೊಲೆ ಮಾಡಿದಕ್ಕೆ ಹಾಗೂ ಮಗಳನ್ನು ಒಬ್ಬಂಟಿಯಾಗಿ ಮಾಡಿದಕ್ಕೆ ನನ್ನ ಮನೆಯವರ ಹಾಗೂ ಸಂಬಂಧಿಕರ ಬಳಿ ಕ್ಷಮೆ ಕೋರುತ್ತೇನೆ. ನನ್ನ ಪತ್ನಿಯ ಮೃತದೇಹವನ್ನು ಆಕೆಯ ತಾಯಿಗೆ ಒಪ್ಪಿಸಿ. ನನ್ನ 10 ಜನ ಸಂಬಂಧಿಕರು ಹಾಗೂ ಅರ್ಚನಾಳ ಸಹೋದರ, ಆಕೆಯ ಅಂಕಲ್‍ನಿಂದ ನನಗೆ ಸಾಕಷ್ಟು ಕಷ್ಟಗಳಾಗಿದೆ. ನನ್ನ ಹಾಗೂ ಅರ್ಚನಾ ನಡುವೆ ಜಗಳವಾಗುತ್ತಿದ್ದಾಗ ಆಕೆಯ ಸಹೋದರ ಹಾಗೂ ಅಂಕಲ್ ಮಧ್ಯಸ್ಥಿಕೆ ವಹಿಸುತ್ತಿದ್ದರು ಎಂದು ಬರೆದಿದ್ದಾನೆ.
ಸುನೀಲ್ ಡೆತ್‍ನೋಟ್ ಬರೆದ ನಂತರ ಸುಮಾರು 2 ಗಂಟೆಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸುನೀಲ್ ತನ್ನ ಪತ್ನಿಗೆ ಅಕ್ರಮ ಸಂಬಂಧ ಇದೆ ಎಂದು ಅನುಮಾನ ಪಡುತ್ತಿದ್ದನು. ಅಲ್ಲದೇ ಈ ವಿಷಯದಲ್ಲಿ ಅವರಿಬ್ಬರ ಸಂಬಂಧಿಕರು ಮಧ್ಯಸ್ಥಿಕೆ ವಹಿಸುತ್ತಿದ್ದರು. ಈ ಹಿಂದೆ ಅರ್ಚನಾ ಪತಿ ವಿರುದ್ಧ ದೂರು ನೀಡಿದ್ದಳು. ಪೊಲೀಸರು ನಾನ್ ಕಾಗ್ನೆಸಿಬಲ್ ರಿಪೋರ್ಟ್ ಮಾಡಿಕೊಂಡು ಇಬ್ಬರ ಮಧ್ಯೆ ಇರುವ ಭಿನ್ನಾಭಿಪ್ರಾಯಗಳನ್ನು ದೂರ ಮಾಡಿ ಸಂಧಾನ ಮಾಡಿ ಕಳುಹಿಸಿದ್ದರು. ಸದ್ಯ ಸುನೀಲ್ ವಿರುದ್ಧ ಕೊಲೆ ಕೇಸ್ ದಾಖಲಿಸಿದ್ದು, ಆತನ ಸಾವು ಆಕಸ್ಮಿಕ ಸಾವು ಎಂದು ಕೇಸ್ ದಾಖಲಾಗಿದೆ ಎಂದು ಎಸಿಪಿ ಪ್ರಕಾಶ್ ನಿಲೇವಾಡ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv