ಬೆಂಗಳೂರು: ನಗರದ ಹೊರವಲಯದ ಸರ್ಜಾಪುರದಲ್ಲಿ ನಡೆದಿದ್ದ ಅಪ್ರಾಪ್ತನ ಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಆನ್‍ಲೈನ್ ಗೇಮ್ ಆಡಲು ಮೊಬೈಲ್ (Mobile) ಕೊಡದೇ ಇರುವುದಕ್ಕೆ ಆತನ ಅಣ್ಣನೇ ತಮ್ಮನನ್ನು ಹತ್ಯೆಗೈದಿರುವುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.
- Advertisement 2-
ಇತ್ತೀಚೆಗೆ ಪ್ರಾಣೇಶ್ (15) ಶವ ಸರ್ಜಾಪುರದ ನೆರಿಗಾ ಗ್ರಾಮದ ಹೊರವಲಯದಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಬಾಲಕನ ಸಹೋದರ ಶಿವಕುಮಾರ್‍ನನ್ನು (18) ವಿಚಾರಣೆ ನಡೆಸಿದಾಗ ತಾನೇ ಹತ್ಯೆಗೈದಿದ್ದಾಗಿ ಒಪ್ಪಿಕೊಂಡಿದ್ದಾನೆ. ಶಿವಕುಮಾರ್ ಆನ್‍ಲೈನ್ ಗೇಮ್ ಹುಚ್ಚಿಗೆ ಬಿದ್ದಿದ್ದು, ಆಟ ಆಡಲು ಮೊಬೈಲ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಹತ್ಯೆಗೈದಿದ್ದಾನೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ: ಟ್ರ‍್ಯಾಕ್ಟರ್ ರೊಟಾವೆಲ್ಟರ್‌ಗೆ ಸಿಲುಕಿ ದೇಹ ಛಿದ್ರ ಛಿದ್ರ; ಅಜ್ಜಿ ಮನೆಗೆ ಬಂದಿದ್ದ ಬಾಲಕ ಸಾವು
- Advertisement 3-
- Advertisement 4-
ಚನ್ನಮ್ಮ ಮತ್ತು ಬಸವರಾಜ್ ಹಾಗೂ ದಂಪತಿಯ ಮಗ ಶಿವಕುಮಾರ್ ಮೂಲತಃ ಆಂಧ್ರ ಮೂಲದ ಸೂಳೆಕೆರಿ ಗ್ರಾಮದವರು. ಕೆಲಸ ಅರಸಿಕೊಂಡು ಕಳೆದ ಮೂರು ತಿಂಗಳ ಹಿಂದೆ ನೆರಿಗಾ ಗ್ರಾಮಕ್ಕೆ ಬಂದಿದ್ದು, ಗಾರೇ ಕೆಲಸ ಮಾಡಿಕೊಂಡಿದ್ದರು. ದಂಪತಿಯ ಇನ್ನೋರ್ವ ಮಗ ಪ್ರಾಣೇಶ್ ಅಜ್ಜಿಯ ಮನೆಯಲ್ಲಿದ್ದು ವಿದ್ಯಾಭ್ಯಾಸ ಮಾಡಿಕೊಂಡಿದ್ದ. ಬೇಸಿಗೆ ರಜೆಯ ಸಲುವಾಗಿ ನೆರಿಗಾ ಗ್ರಾಮಕ್ಕೆ ಬಂದಿದ್ದ. ಈ ವೇಳೆ ಈ ಬಾಲಕ ದುರಂತ ಅಂತ್ಯ ಕಂಡಿದ್ದಾನೆ.
ಆರೋಪಿ ಮೊದಲೇ ಸಂಚು ರೂಪಿಸಿ ತಮ್ಮನ ಹತ್ಯೆಗೈಯಲು ನಿರ್ಮಾಣ ಹಂತದ ಕಟ್ಟಡದಿಂದ ಸುತ್ತಿಗೆ ತಂದಿದ್ದ. ಬಹಿರ್ದೆಸೆಗೆ ತೆರಳಿದ್ದಾಗ ಆತನ ಮೇಲೆ ದಾಳಿ ಮಾಡಿ ಹತ್ಯೆಗೈದಿದ್ದ. ಬಳಿಕ ನಾಪತ್ತೆಯಾಗಿದ್ದ ಪ್ರಾಣೇಶ್ ಹುಡುಕಾಟ ನಡೆಸಲು ಆರಂಭಿಸಿದಾಗ, ಏನು ಗೊತ್ತಿಲ್ಲದ್ದಂತೆ ತಾನು ಹುಡುಕಾಟ ನಡೆಸಿ ಬಾಲಕನ ಮೃತದೇಹ ಪತ್ತೆಯಾದ ಬಗ್ಗೆ ಮಾಹಿತಿ ಕೊಟ್ಟಿದ್ದ. ತಾನೇ ಮೊದಲು ಮೃತದೇಹ ನೋಡಿದ್ದಾಗಿ ಹೇಳಿದ್ದ. ಇದರಿಂದ ಪೊಲೀಸರಿಗೆ ಆತನ ಮೇಲೆ ಅನುಮಾನ ಮೂಡಿ ವಿಚಾರಣೆ ನಡೆಸಿದಾಗ ಸತ್ಯಾಂಶ ಪ್ರಕಟವಾಗಿದೆ. ಇದನ್ನೂ ಓದಿ: ಅನ್ಯಕೋಮಿನ ಯುವಕನಿಂದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ – ಆರೋಪಿ ಅರೆಸ್ಟ್