ಲಕ್ನೋ: ಮಹಿಳೆಯೊಬ್ಬಳು ತನ್ನ ಪ್ರಿಯಕರನ್ನು ಮದುವೆಯಾಗಲು ಒತ್ತಾಯಿಸಿದ್ದಕ್ಕೆ ಮಹಿಳೆಯೇ ಹತ್ಯೆಯಾದ ಘಟನೆ ಮಿರತ್‌ನಲ್ಲಿ ನಡೆದಿದೆ.
ಸೈಫ್‌ಪುರ ಗ್ರಾಮದ ನಿವಾಸಿ ಕಾಂಚನಾ ಶರ್ಮಾ(22) ಕೊಲೆಯಾದ ಯುವತಿ. ಕಾಂಚನಾ ಬಿಎ ವಿದ್ಯಾರ್ಥಿನಿಯಾಗಿದ್ದು, ಹಸ್ತಿನಾಪುರದಲ್ಲಿ ಕಂಪ್ಯೂಟರ್ ಕೋಚಿಂಗ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಳು. ಮೂರು ತಿಂಗಳ ಹಿಂದೆ, ಅವಳು ರೋಹಿತ್‌ನನ್ನು ಭೇಟಿಯಾಗಿದ್ದಳು. ಈ ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿತ್ತು.
Advertisement
Advertisement
ಈ ಹಿನ್ನೆಲೆಯಲ್ಲಿ ಕಾಂಚನಾ ತನ್ನನ್ನು ಮದುವೆಯಾಗುವಂತೆ ರೋಹಿತ್‌ಗೆ ಒತ್ತಡ ಹೇರುತ್ತಿದ್ದಳು. ಬುಧವಾರ ಕಾಂಚನಾ ರೋಹಿತ್‌ಗೆ ಕರೆ ಮಾಡಿ, ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಈ ವಿಷಯ ಆರೋಪಿಯ ಕೋಪಕ್ಕೆ ಕಾರಣವಾಗಿದೆ. ನಂತರ ಅವರಿಬ್ಬರು ಭೇಟಿಯಾಗಿದ್ದಾರೆ. ಆಗ ರೋಹಿತ್ ಅವಳನ್ನು ಕಾರಿನಲ್ಲಿ ಕಾಡಿಗೆ ಕರೆದೊಯ್ದು ಕಾಂಚನಾಳ ಕತ್ತು ಹಿಸುಕಿದ್ದಾನೆ. ಅಲ್ಲದೆ ತನ್ನ ಸ್ನೇಹಿತರ ಸಹಾಯದಿಂದ ಕಾಂಚನಾಳನ್ನು ನದಿಗೆ ಎಸೆದಿದ್ದಾನೆ.
Advertisement
Advertisement
ಕಾಂಚನಾ ಡಿ. 6ರಂದು ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಅವಳ ತಂದೆ ಹಸ್ತಿನಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ಪ್ರಾವಿಷನ್ ಸ್ಟೋರ್ ಮಾಲೀಕ ರೋಹಿತ್ ಮತ್ತು ಆತನ ಇಬ್ಬರು ಸ್ನೇಹಿತರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮೆಕ್ಸಿಕೋ ಅಪಘಾತ – 49 ಮಂದಿ ಸಾವು, 58 ಮಂದಿಗೆ ಗಾಯ
ರೋಹಿತ್ ಪ್ರಮುಖ ಆರೋಪಿಯಾಗಿದ್ದು, ರಾಹುಲ್ ಮತ್ತು ಸೌರಭ್ ಕೊಲೆಗೆ ಸಹಾಯ ಮಾಡಿದ್ದಾರೆ. ಮಹಿಳೆಯನ್ನು ಕೊಂದು ಶವವನ್ನು ಗಂಗಾ ನದಿಯಲ್ಲಿ ಎಸೆಯಲು ಸೌರಭ್‌ಗೆ ಅವನ ಸ್ನೇಹಿತರು ಸಹಾಯ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅದ್ಧೂರಿಯಾಗಿ ನೆರವೇರಿತು ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಮದುವೆ
ಪ್ರಕರಣ ಸಂಬಂಧ ಆರೋಪಿಗಳು ಮಹಿಳೆಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಹಸ್ತಿನಾಪುರದ ಭೀಮಕುಂಡ ಗಂಗಾ ನದಿಯಿಂದ ಮಹಿಳೆಯ ಶವ ಹೊರತೆಗೆಯಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.